Followers

Saturday, June 12, 2021

ಪುತ್ತೂರ್ ಅಜ್ಜ

 ರಾಮಚಂದ್ರ ಭಟ್ರವರ ಹೆತ್ತವರು  ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ  ತರುವಾಯ 1916 ಜೂನ್ 15 ರಂದು ನೆಟ್ಟಾರಿನಲ್ಲಿ  ರಾಮಚಂದ್ರರ ಜನನವಾಯಿತು. ಅವರು ತಮ್ಮಷ್ಟಕ್ಕೆ ಒಬ್ಬ ಮೌನ  ವ್ಯಕ್ತಿಯಾಗಿದ್ದರು. ನೆರೆಹೊರೆಯವರು ಮತ್ತು ಸ್ನೇಹಿತರು ರಾಮಚಂದ್ರರಿಂದ  ಆಗಾಗ್ಗೆ ವಿವಿಧ ವಿಷಯಗಳ ಬಗ್ಗೆ ಸಲಹೆ ಪಡೆಯುತ್ತಿದ್ದರು. ಅಡಿಕೆ ಕೃಷಿ ಮತ್ತು ಭತ್ತದ ಕೃಷಿಯ ಜೊತೆಗೆ; ತರಕಾರಿ ಬೆಳೆಯುವುದು, ಪಶುಸಂಗೋಪನೆ, ಕಲ್ಲು ಮತ್ತು ಮಣ್ಣಿನಿಂದ ಮನೆನಿರ್ಮಾಣ ಮುಂತಾದ  ಗ್ರಾಮೀಣ ಜೀವನದ ಆಯಾಮಗಳ ಬಗ್ಗೆ ಅವರು ಬಹಳ ಪರಿಣತರಾಗಿದ್ದರು. ಅವರು 8 ನೇ ತರಗತಿಯವರೆಗೆ ಅಧ್ಯಯನ ಮಾಡಿದರು ಮತ್ತು   ಕ್ಲುಪ್ತ ಸಮಯದಲ್ಲಿ ಪಾರ್ವತಿ ಎಂಬಾಕೆಯನ್ನು ವಿವಾಹವಾಗಿ ಒಂದು ಸಾಮಾನ್ಯ ಜೀವನವನ್ನು ನಡೆಸುತಿದ್ದರು. ದಂಪತಿಗೆ ಗಂಡು ಮಗು ಕೂಡ ಇತ್ತು.

ರಾಮಚಂದ್ರರು  ತಮ್ಮ  36 ನೇ ವರ್ಷದವರೆಗೂ ಸಾಮಾನ್ಯ  ಜೀವನವನ್ನು ನಡೆಸುತ್ತಿದ್ದರು ಆದರೆ ಇದ್ದಕ್ಕಿದ್ದಂತೆ ಒಮ್ಮೆ ಅವರ ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿತು. ನೋವು ಕ್ರಮೇಣ ದೇಹದ ಇತರ ಭಾಗಗಳಲ್ಲಿ ಹರಡಿತು ಮತ್ತು ನೋವು ವಿವಿಧ ಭಾಗಗಳಲ್ಲಿ  ವಿವಿಧ ರೀತಿಯಲ್ಲಿ ಅನುಭವಕ್ಕೆ ಬಂತು. ಅಸ್ವಸ್ಥತೆ ರಾಮಚಂದ್ರರಿಗೆ ಒಂದು  ಬಂಧನದಂತೆ ಭಾಸವಾಗಿತ್ತು. ಜೀವ ಶಕ್ತಿ ದೇಹದಿಂದ ನಿರ್ಗಮಿಸುತ್ತದೆ ಎಂಬಂತಿತ್ತು. ಅವರು  ಹೀಗೆ ಬಳಲುತ್ತಿರುವದನ್ನು ನೋಡಿ ಕುಟುಂಬ ಸದಸ್ಯರು ವೈದ್ಯಕೀಯ ನೆರವಿನ  ವ್ಯವಸ್ಥೆ ಮಾಡಿದರು. ವೈದ್ಯಕೀಯ ನೆರವು ಪರಿಣಾಮಕಾರಿಯಲ್ಲದ ಕಾರಣ ಜ್ಯೋತಿಷ್ಯ ಹಾಗೂ ಇತರ ನಿರ್ದಿಷ್ಟ ಪರಿಹಾರಗಳನ್ನು ಪ್ರಯತ್ನಿಸಲಾಯಿತು. ಸಮಯದಲ್ಲಿಯೇ ರಾಮಚಂದ್ರರಿಗೆ ವಿವಿಧ ಚಿಕಿತ್ಸಾ ವಿಧಾನಗಳಲ್ಲಿ ಪರಿಣತಿಯನ್ನು ಪಡೆದ ಇಸ್ಮಾಯಿಲ್ ಎಂಬ ಚಿಕಿತ್ಸಕನ ನೆರವು ದೊರೆಯುತ್ತದೆ. ನಿರ್ಣಾಯಕ ಹಂತದಲ್ಲಿ ರಾಮಚಂದ್ರರ ದಿನಚರಿಗಳು ವಾಡಿಕೆಯಂತೆ ನಡೆಯುತ್ತಿದ್ದವು. ಅವರಿಗೆ ನೋವಿನ ಬಂಧನದಿಂದ ಮುಕ್ತರಾಗಬೇಕೆಂಬ ಆಸೆ ಇರಲಿಲ್ಲ. ಮನಸ್ಸು ಪೂರ್ಣವಾಗಿ  ನೋವಿನ ಮೇಲೆ ಕೇಂದ್ರೀಕೃತವಾಗಿತ್ತು.   ಸ್ಥಿತಿ ಸುಮಾರು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರೆಯಿತು. ಸಮಯದಲ್ಲಿ ಇವರ  ದೈಹಿಕ ಅಗತ್ಯತೆಗಳ ಸಂಪೂರ್ಣ ಜವಾಬ್ದಾರಿಯನ್ನು ಮುಸ್ಲಿಂ ಚಿಕಿತ್ಸಕ ಇಸ್ಮಾಯಿಲ್ ವಹಿಸಿಕೊಂಡರು.

ಪರಿಸ್ಥಿತಿ ಹೀಗೆ ಮುಂದುವರಿಯುತ್ತಿದ್ದಂತೆ ಆಕಸ್ಮಿಕವಾಗಿ ಒಂದು ದಿನ ನೋವು ಮಾಯವಾಯಿತು ಮತ್ತು ದೇಹವು ಬಂಧನದಿಂದ  ಮುಕ್ತವಾಯಿತು. ಆಕಸ್ಮಿಕವಾಗಿ  ಬಂದ ಅಂತಹ ಭಯಾನಕ ನೋವು ತಾನಾಗೇ ಕಣ್ಮರೆಯಾದಾಗ, ಆಶ್ವರ್ಯದ  ಜೊತೆಗೆ ನೋವಿನ ಬಂಧನಕ್ಕೆ ಕಾರಣವೇನೆಂದು ವಿಚಾರಿಸುವತ್ತ ಮನಸ್ಸು ಹೊರಳಿತು.

ವಿಚಾರಣೆಯ ಸಮಯದಲ್ಲಿನ  ಅವಲೋಕನಗಳು ಕೆಳಕಂಡಂತಿವೆ:

1.0 ಬಂಧನ  ಅಂದರೇನು? ದೇಹವು ಬಂಧನಕ್ಕೆ ಏಕೆ ಒಳಗಾಯಿತು?

ಉತ್ತರ: ಬಂಧನಕ್ಕೆ ಕಾರಣ ಕರ್ಮ. ಕರ್ಮಕ್ಕೆ ಕಾರಣ ಮನಸ್ಸು. ಮನಸ್ಸು ಅಂದರೇನು? ನಾನು ಮತ್ತು ನನ್ನ ಭಾವನೆಗಳ (ಅಹಂ) ಒಂದು ಸಂಯೋಜನೆ ಮನಸ್ಸು. ಕರ್ಮದಲ್ಲಿ  ಸಕಾಮಾ ಮತ್ತು ನಿಷ್ಕಾಮ ಕರ್ಮಗಳೆಂಬ ಎರಡು ವಿಧಗಳಿವೆ. ಸಕಾಮ ಕರ್ಮದ  ಫಲವು  ಪುನರ್ಜನ್ಮಕ್ಕೆ (ಸುಖ-ದುಃಖಗಳೆಂಬ ಬಂಧನ ) ಕಾರಣವಾಗಿದೆ. ನಿಷ್ಕಾಮ ಕರ್ಮದ ಫಲವು ವಿಮೋಚನೆಗೆ (ಆನಂದಕ್ಕೆ) ಕಾರಣವಾಗಿದೆ.

ಎರಡೂ ಕ್ರಿಯೆಗಳಿಗೆ ಮನಸ್ಸು ಮಾತ್ರ ಕಾರಣವಾಗಿದೆ. ಸಂಕುಚಿತ ಭಾವನೆ- ಸಕಾಮ  ಕರ್ಮ. ವಿಸ್ತೃತ (ವಿಶಾಲ) ಭಾವನೆ- ನಿಷ್ಕಾಮ ಕರ್ಮ.

2.0 ಕರ್ಮಗಳಲ್ಲಿ ಯಾವುವು  ಅಗ್ರಗಣ್ಯ ?

ವೇದಗಳಲ್ಲಿ ವಿವರಿಸಲಾದ  ಕರ್ಮಗಳು ಅಗ್ರಗಣ್ಯ ಕರ್ಮಗಳಾಗಿವೆ. ವೇದಗಳ ಕರ್ಮ ಕಾಂಡದಲ್ಲಿ ವರ್ಣಿಸಲಾಗಿರುವ ಕರ್ಮಗಳು ಬಂಧನಕ್ಕೆ ಕಾರಣವಾಗಿವೆ.

3.0 ವಿಶ್ವದಲ್ಲಿ  ಪ್ರಮುಖ ವಿಷಯ ಯಾವುದು?

ವೇದಗಳಲ್ಲಿ  ವರ್ಣಿಸಲಾಗಿರುವ  ಕರ್ಮಗಳಿಗೆ ಹಣದ ಅಗತ್ಯವಿರುವುದರಿಂದ ಹಣವು ವಿಶ್ವದ  ಅತ್ಯಂತ ಮುಖ್ಯವಾದ ವಿಷಯ. ಹಣದ ವಿಷಯಕ್ಕೆ ಸಂಬಂಧಪಟ್ಟಂತೆ  ಇತರ ಕೆಲವು ಅಂಶಗಳು ವಿಚಾರಣೆಯ ಸಂಧರ್ಭದಲ್ಲಿ  ಬಹಿರಂಗಗೊಂಡವುಹೀಗೆ ಪ್ರಶ್ನೋತ್ತರದಿಂದ ವಿಚಾರಣೆ ಸಲೀಸಾಗಿ ಮುಂದುವರಿಯಿತು. ಸಮಯದಲ್ಲಿ ಮನಸ್ಸು ಬುದ್ಧಿಯಲ್ಲಿ ಕೇಂದ್ರೀಕೃತವಾಗಿತ್ತು.

ವಿಚಾರಣೆಯ ಕೊನೆಯ ರಾತ್ರಿಯಲ್ಲಿ, ಮನಸ್ಸು ಹಣದ ಸ್ವರೂಪ ಮತ್ತು ಮೂಲವನ್ನು ಹುಡುಕಲು ಪ್ರಾರಂಭಿಸಿತು, ಕ್ಷಣದಲ್ಲಿ ದಿಗಂತದ ಕೇಂದ್ರ ಭಾಗದಲ್ಲಿಅತಿ ಸುಂದರವಾದ ಆದರೂ ಭಯಾನಕವಾದಸ್ತ್ರೀ ರೂಪವು ಪ್ರತ್ಯಕ್ಷವಾಯಿತು. ಇದು ವರ್ಣನಾತೀತ ಸಾವಿನ ವ್ಯಕ್ತಿತ್ವ ಹಾಗೂ ಹಣದ ಮೂಲ ಸ್ವರೂಪ  ಎಂದು ತಿಳಿದುಬಂತು. ಅಷ್ಟರಲ್ಲೇ ರೂಪವು ತಕ್ಷಣ ಕಣ್ಮರೆಯಾಯಿತು ಮತ್ತು ಸಣ್ಣ ಬಾಗಿಲಿನ ಹೋಲಿಕೆಯು ಆ  ಸ್ಥಳದಲ್ಲಿ ಕಾಣಬಂತು. ತದನಂತರ ಹೊಸ ದೃಶ್ಯಗಳು ಗೋಚರಿಸಿದವು.

4.0 ಇಲ್ಲಿಯವರೆಗೆ ವಿಚಾರಣೆಯ ಸಮಯದಲ್ಲಿ ಕಂಡುಕೊಳ್ಳಲಾದ ಸಂಗತಿಗಳು ಯಾರಿಗೆ ಸಂಭವಿಸಿದವು (ನಾನು ಯಾರು)? ಎನ್ನುವುದರ ಕುರಿತು  ವಿಚಾರಣೆಮಾಡಲು  ಹೊರಗಿನ ಇಂದ್ರಿಯಗಳು ನಿರ್ಜೀವವಾಯಿತು ಮತ್ತು ಆಂತರಿಕ ಪ್ರಜ್ಞೆ ಮಾತ್ರ ಎಚ್ಚರವಾಯಿತು. ಅದೇ ವೇಳೆಯಲ್ಲಿ ಒಂದು ಶಕ್ತಿಯು ದೇಹವನ್ನು ಬಿಟ್ಟು, ಸಾವಿನ ಮನೆಯನ್ನು ದಾಟಿ  ನಿತ್ಯ ಬೆಳಕಿನ ಮನೆಯನ್ನು ತಲುಪಿತು.   ಪ್ರಕ್ರಿಯೆಯಲ್ಲಿ ದೈವಿಕ ಶಕ್ತಿಗಳ ಮತ್ತು ಆತ್ಮಿಕ ಮಾರ್ಗದರ್ಶಕರ ಮಾರ್ಗದರ್ಶನವಿತ್ತು. ಕೂಡಲೇ ಸ್ವಯಂ ಪ್ರಕಾಶಿಸುವ  ನಿತ್ಯ ಬೆಳಕಿನ ಶಕ್ತಿಯು ಮಿಂಚಿನ ವೇಗದಲ್ಲಿ ಅಲ್ಲಿಂದ ಮರೆಯಾಗಿ ಶರೀರದ ಆಜ್ಞಾ ಚಕ್ರದಲ್ಲಿ ಲೀನವಾಯಿತು. ಆತ್ಮಿಕ ದರ್ಶನದಲ್ಲಿ ಎಲ್ಲಾ ಸಂಗತಿಗಳು ಕಂಡುಬಂದವು.

ಆಮೇಲೆ ದೈವಿಕ ಶಕ್ತಿಯು ಮಾಯವಾಯಿತು  ಮತ್ತು ಇಂದ್ರಿಯಗಳು ಪ್ರಜ್ಞಾಸ್ಥಿತಿಗೆ ಬಂದವು  ಮತ್ತು  ವಿವರಿಸಲಾಗದ ಆನಂದದ ಅನುಭವವಾಯಿತು  ಆನಂದದ ಸ್ಥಿತಿಯಲ್ಲಿ ದೇಹವು ನಿದ್ರೆಗೆ  ಜಾರಿತು. ನಿದ್ದೆಯಿಂದ ಜಾಗೃತಗೊಂಡಾಗ ಕೇಳಿಸಿಕೊಂಡ ಮಾತುಗಳು:

ಮೊದಲಿನದು ಹೋಗಿದೆ, ಪ್ರಸ್ತುತವಾಗಿರುವಂತದ್ದು  ಬಂದಿದೆ.

ಹೊರಹೊಮ್ಮಿದ ಮುಂದಿನ ಪದಗಳು: ನಾನು ದೇಹವಲ್ಲ ಆದರೆ ಅದರಲ್ಲಿ ವಾಸಿಸುವವನು. ನನಗೆ ತಾಯಿ, ತಂದೆ ಅಥವಾ ಹತ್ತಿರದ -ದೂರದ ಆತ್ಮೀಯರಿಲ್ಲ. ಮನೆ, ಆಸ್ತಿ, ವಸ್ತುಗಳು, ಹಣ, ಕುಟುಂಬ ನನ್ನದಲ್ಲ.

ಆನಂದ ಕುಟೀರ

ಅವರು 1970 ರಲ್ಲಿ ಪುತ್ತೂರಿಗೆ  ಬಂದರು ಮತ್ತು ಪಾರಮಾರ್ಥದ ಸತ್ಯ ತಿಳಿಯುವ ಹಂಬಲವಿದ್ದವರೊಂದಿಗೆ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಲು ಪ್ರಾರಂಭಿಸಿದರು. ಅವರನ್ನು "ಪುತ್ತೂರ್ ಅಜ್ಜ" ಎಂದು ಕರೆಯಲಾಯಿತು. ಅವರು ಕೆಮ್ಮಾಯಿಯಲ್ಲಿ ಆನಂದ ಕುಟೀರದಲ್ಲಿ  ವಾಸಿಸುತ್ತಿದ್ದರು. ಕೆಲವರ ಅವಹೇಳನ ಹಾಗು ವಿರೋಧದ ಹೊರತಾಗಿಯೂ, ತಾವು  ಬೋಧಿಸಿದ ಪ್ರಕಾರ ರಾಮಚಂದ್ರರು ಜೀವಿಸುತ್ತಿದ್ದರು. ಆದರೆ ಅವರು ಯಾವಾಗಲೂ ಪ್ರಚಾರದಿಂದ ದೂರ ಉಳಿದಿದ್ದರು. ಅವರು ಯಾವಾಗಲೂ, " ದೇಹವು ನನ್ನದಲ್ಲ" ಎಂಬ ಅರಿವಿಗೆ ಅಂಟಿಕೊಂಡಿದ್ದರು. ಪ್ರಮುಖ ಕನ್ನಡ ವಾರಪತ್ರಿಕೆ 'ತರಂಗ' ಅವರ ಬಗ್ಗೆ ವಿವರವಾದ ಲೇಖನವನ್ನು ಪ್ರಕಟಿಸಿದಾಗ, 1990 ದಶಕದಲ್ಲಿ ಅವರ ತತ್ವಶಾಸ್ತ್ರ ಮತ್ತು ಜೀವನವು ಇಡೀ ಜಗತ್ತಿಗೆ ತಿಳಿಯ  ಬಂದಿತು.

ಚಿಂತಕರು ಮತ್ತು ಸಮಾನ ಮನಸ್ಕ ಜನರ ಬೆಂಬಲದೊಂದಿಗೆ ರಾಮಚಂದ್ರರು 1999 ರಲ್ಲಿ ಬರಹಗಾರ-ವಿಮರ್ಶಕ ಲಕ್ಷ್ಮೀಶ್ ತೋಲ್ಪಾಡಿ ಅವರ ನೇತೃತ್ವದಲ್ಲಿ ಸತ್ಯ ಶೋಧನ ಟ್ರಸ್ಟ್ ಅನ್ನು ಪ್ರಾರಂಭಿಸಿದರು. ರಾಮಚಂದ್ರರ ಅನುಯಾಯಿಗಳಲ್ಲಿ ಅವರ ವಿಶಿಷ್ಟ ತತ್ತ್ವಶಾಸ್ತ್ರದ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದರು. ಅಮೆರಿಕದ ಒಬ್ಬ ವಿದ್ವಾಂಸರು ಇದನ್ನು ವೆಬ್ಸೈಟ್ನಿಂದ ಆರಿಸಿ ಮುದ್ರಣ ರೂಪದಲ್ಲಿ ಪ್ರಕಟಿಸಿದರು. ಎಲ್ಲಾ ಮೂಲಗಳಿಂದ ರಾಮಚಂದ್ರರವರ ವಿಚಾರಗಳು ಅಮೆರಿಕ, ರಷ್ಯಾ ಮತ್ತು ಜಗತ್ತಿನ ಇತರ ಸ್ಥಳಗಳಿಗೆ ತಲುಪಿ, ಅಲ್ಲಿಂದ ಅನೇಕ ವಿದೇಶಿಗರು ಪುತ್ತೂರಿನ ಅಜ್ಜರನ್ನು ಹುಡುಕಿ  ಆನಂದ ಕುಟೀರಕ್ಕೆ ಭೇಟಿ ನೀಡಿ ಅವರಿಂದ ಆಧ್ಯಾತ್ಮಿಕ ಮಾರ್ಗದರ್ಶನವನ್ನು  ಪಡೆಯಲು ಪ್ರಾರಂಭಿಸಿದರು.

ಕೆಲವು ವಿಶೇಷ ವ್ಯಕ್ತಿಗಳಾದ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, ಬನ್ನಂಜೆ ಗೋವಿಂದಾಚಾರ್ಯ ಮತ್ತು ಇತರರು ಆಗಾಗ್ಗೆ ಆನಂದ ಕುಟೀರಕ್ಕೆ  ಭೇಟಿ ನೀಡಿ ಅಜ್ಜರೊಂದಿಗೆ ಸಮಯ ಕಳೆಯುತಿದ್ದರು.

ಅವನು ತಮ್ಮ ಐಹಿಕ ಪ್ರವಾಸ ಮುಗಿಯುವ  ಒಂದೆರಡು ವರ್ಷಗಳ ಮೊದಲೇ  ದೇಹದ  ಅಂತ್ಯಕ್ರಿಯೆಗೆ ಸಮಾಧಿಯನ್ನು ಸಿದ್ಧಪಡಿಸಿದ್ದರು. ೨೦೦೭ ರಲ್ಲಿ  ಅವರ ಆರೋಗ್ಯ ಹದಗೆಟ್ಟು ಆರಂಭದಲ್ಲಿ ಪುತ್ತೂರಿನ  ಆದರ್ಶ ಆಸ್ಪತ್ರೆಗೆ  ಮತ್ತು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಅಂತಿಮವಾಗಿ ಮಾರ್ಚ್ 12 ಸೋಮವಾರ ಮುಂಜಾನೆ ತಮ್ಮ ದೇಹತ್ಯಾಗ ಮಾಡಿದರು . ಪುತ್ತೂರಿನ  ಅಜ್ಜರ  ಶವವನ್ನು ಆನಂದ ಕುಟೀರಕ್ಕೆ  ತರಲಾಯಿತು ಮತ್ತು ಸಮಾಧಿ ಸ್ಥಿತಿಯಲ್ಲಿ  ಇಡಲಾಯಿತು. ಅವರ ಅನುಯಾಯಿಗಳು ಮತ್ತು ಅಭಿಮಾನಿಗಳು ತಮ್ಮ ಪ್ರೀತಿಯ ಮತ್ತು ಗೌರವಾನ್ವಿತ ಅಜ್ಜರ ಅಂತಿಮ ನಮನಕ್ಕೆ  ಅಪಾರ ಸಂಖ್ಯೆಯಲ್ಲಿ ಬಂದರು.


ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ 

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...