ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿ, ಚನ್ನಬಸವಣ್ಣನವರದು ಬಹು ಪ್ರಮುಖವಾದುದು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ; ಚನ್ನಬಸವಣ್ಣನವರು ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು ಮಾತ್ರ. ಹನ್ನೆರಡನೆಯ ಶತಮಾನದ ಯುಗಪುರುಷನೂ; ಸಾಮಾಜಿಕ ಬದಲಾವಣೆಗಳ ಹರಿಕಾರನೂ; ಅಸಮಾನತೆಯ ವಿರುದ್ದ ದನಿಯೆತ್ತಿ, ವ್ಯವಸ್ಠೆಯ ಆಕ್ರೋಶಕ್ಕೆ ಗುರಿಯಾದ, ಬಸವಣ್ಣನವರ ಸೋದರಳಿಯ ಚನ್ನಬಸವಣ್ಣ.ಬಸವಣ್ಣನವರ ಸೋದರಳಿಯನೆಂಬುದಕ್ಕಿಂತಲೂ, ಸ್ವ ಸಾಮರ್ಥ್ಯ ಮತ್ತು ಸಾಧನೆಗಳಿಂದ ಕೀರ್ತಿವಂತವಾದ ವ್ಯಕ್ತಿತ್ವ ಚನ್ನಬಸವಣ್ಣನದು.
ಚನ್ನ ಬಸವಣ್ಣನವರ ತಾಯಿ ಅಕ್ಕನಾಗಾಯಿ ಅಥವಾ ನಾಗಲಾಂಬಿಕೆ. ಸ್ವತಃ ಚನ್ನಬಸವಣ್ಣನವರ ವಚನಗಳಿಂದ, ಇತರ ವಚನಕಾರರ ಉಕ್ತಿಗಳಿಂದ ಮತ್ತು ಪುರಾಣಗಳಿಂದ ಚನ್ನಬಸವಣ್ಣನವರ ತಾಯಿಯ ಬಗ್ಗೆ ವಿವರಗಳು ಸಾಕಷ್ಟು ದೊರಕುತ್ತವೆ. ಆದರೆ ಚನ್ನಬಸವಣ್ಣನವರ ತಂದೆಯ ಬಗ್ಗೆ ಸಿಗುವ ವಿವರಗಳು, ಹೆಚ್ಚು ಕಾಲ್ಪನಿಕವಾಗಿವೆ. ಕ್ರಿ.ಶ. ೧೪೨೫ ವರೆಗೆ ಚನ್ನಬಸವಣ್ಣನವರ ಜನನದ ಬಗ್ಗೆ ಸರಿಯಾದ ವಿವರಗಳಿಲ್ಲ. ಸು. ೧೪೨೫ರಲ್ಲಿ ಲಕ್ಕಣ್ಣ ದಂಡೇಶನು ತನ್ನ ಶಿವ ತತ್ವ ಚಿಂತಾಮಣಿಯಲ್ಲಿ ಶರಣರ ಪ್ರಸಾದ ಸೇವನೆಯಿಂದ ನಾಗಲಾಂಬಿಕೆ ಗರ್ಭ ಧರಿಸತ್ತಾಳೆ ಎಂದು ಬರೆಯುತ್ತಾನೆ.
ಇನ್ನೂ ಹಲವರು ಬಸವನ ಒಕ್ಕುಮಿಕ್ಕ ಪ್ರಸಾದದಿಂದ, ಇನ್ನೂ ಹಲವರು ಡೋಹರ ಕಕ್ಕಯ್ಯನ ಒಕ್ಕು ಮಿಕ್ಕ ಪ್ರಸಾದದಿಂದ ಚನ್ನಬಸವಣ್ಣನ ಜನ್ಮವಾಯಿತೆಂದೂ ಕಲ್ಪಿಸುತ್ತಾರೆ. ಕಾಲಮಾನಗಳು ಶರಣರ ಜೀವಿತಾವಧಿಗಳಿಗೆ ಇವಾವೂ ಸಹ ಐತಿಹಾಸಿಕ ವಾಗಿ ಹೊಂದಿಕೆಯಾಗುವುದಿಲ್ಲ. ಒಕ್ಕು ಮಿಕ್ಕ ಪ್ರಸಾದದ ಕಥೆಗಳನ್ನು ನಂಬುವುದಾದರೆ ಚನ್ನಬಸವಣ್ಣನ ಜನನ ಕಲ್ಯಾಣದಲ್ಲಿ ಸಂಭವಿಸಿತೆಂದು ಒಪ್ಪಬೇಕಾಗುತ್ತದೆ. ಇದಕ್ಕೆ ಕಾಲದ ಹೊಂದಾಣಿಕೆಯಾಗುವುದಿಲ್ಲ. ಬಸವಣ್ಣನು
ಕಲ್ಯಾಣಕ್ಕೆ ಬರುವ ವೇಳೆಗೆ ಚನ್ನಬಸವಣ್ಣನಿಗೆ ಕನಿಷ್ಟ ೧೦-೧೨ ವರ್ಷಗಳಾದರೂ ಆಗಿರಲೇಬೇಕಾಗುತ್ತದೆ.
ಅಂದರೆ ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.ಶ. ೧೫೦೦ರರಲ್ಲಿ
ರಚನೆಯಾದ ಸಿಂಗಿರಾಜನ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ
ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ
ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜನು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟನಾಗಿರುವುದರಿಂದ, ಸಿಂಗಿರಾಜ
ಪುರಾಣದ ವಿವರಣೆಗೆ ಬಲ ಬರುತ್ತದೆ.
ಕಾಲಜ್ಞಾನದ
ವಚನಗಳ ಪ್ರಕಾರ , ಚನ್ನಬಸವಣ್ಣನ
ಜನನ, ನಂದನ ನಾಮ ಸಂವತ್ಸರದ ವೈಶಾಖ ಶುದ್ದ ಪಾಡ್ಯ ಮಂಗಳವಾರ ಪ್ರಾತಃಕಾಲ ಕೃತ್ತಿಕಾ ನಕ್ಷತ್ರದಲ್ಲಿ (ಕ್ರಿ.ಶ.
೧೧೪೪) ಎಂದು ತಿಳಿದು ಬರುತ್ತದೆ. ರಾಕ್ಷಸ ನಾಮ ಸಂವತ್ಸರದ ಕಾರ್ತೀಕ ಮಾಸದಲ್ಲಿ ಉಳವಿ ಯಲ್ಲಿ ಲಿಂಗೈಕ್ಯ (ಕ್ರಿ.ಶ.೧೧೬೮). ಈ ಎರಡರ ನಡುವಣ ಕಾಲಾವಧಿ ಕೇವಲ ೨೪ ವರ್ಷಗಳು.
"ಚನ್ನಬಸವಣ್ಣ"ನು ಸು ಕ್ರಿ.ಶ. ೧೧೫೬ರಲ್ಲಿ
ಸ್ಥಾಪಿಸಲಾದ ಶಿವಾನುಭವ ಮಂಟಪದಲ್ಲಿ ಸಕ್ರಿಯವಾಗಿ ಪಾತ್ರ ವಹಿಸುತ್ತಾನೆ, ಆಗ ಅವನಿಗೆ ಕೇವಲ ಹನ್ನೆರಡು ವರ್ಷ ಇರಬಹುದು. ಲಿಂಗಾಯತ ಧರ್ಮದ ಸಾಂಪ್ರದಾಯಕ ವಚನಗಳನ್ನು ಪರಿಷ್ಕರಿಸಿ, ಷಟ್ಸ್ಥಲ ಸಂಪ್ರದಾಯಕ್ಕೆ ನೆಲೆಯನ್ನು ಕಲ್ಪಿಸಿದ ಪ್ರಮುಖರಲ್ಲಿ, ಚನ್ನಬಸವಣ್ಣನವರ
ಹೆಸರು ಮೊದಲನೆಯದು. ಚನ್ನ ಬಸವಣ್ಣನವರ ವಚನಗಳೂ ಸಹ ತುಂಬಾ ಅನುಭಾವಪೂರ್ಣವಾಗಿ, ಲಿಂಗಾಯತ ಸಿದ್ದಾಂತವನ್ನು ವಿವರಿಸುತ್ತವೆ.
ಕಲ್ಯಾಣದ ಕ್ರಾಂತಿಯ ನಂತರ
ಕಲ್ಯಾಣದಲ್ಲಿದ್ದ ಶರಣರಿಗೆ ನೆಲೆ
ತಪ್ಪಿ,
ದಿಕ್ಕು
ದಿಕ್ಕಿಗೆ ಚದುರಿ
ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸೊನ್ನಲಾಪುರಕ್ಕೆ, ಶ್ರೀಶೈಲಕ್ಕೆ ಹೀಗೆ
ವಿವಿಧ
ಸ್ಥಳಗಳಿಗೆ, ತಂಡಗಳು
ತೆರಳಿದವು. ಶರಣರ
ಬಹು
ದೊಡ್ಡ
ಗುಂಪು,
ಚನ್ನಬಸವಣ್ಣನವರ ನೇತೃತ್ವದಲ್ಲಿ, ಉಳವಿಯ
ಕಡೆಗೆ
ಹೊರಟಿತು. ಚಿಕ್ಕ
ವಯಸ್ಸಿನ ಚನ್ನಬಸಣ್ಣನವರ ಹೆಗಲ
ಮೇಲೆ
ಇಂಥ
ಗುರುತರವಾದ ಹೊಣೆಗಾರಿಕೆ ಬಿದ್ದುದನ್ನು, ತುಂಬಾ
ಕಷ್ಟದಿಂದ ಅವರು
ನಿಭಾಯಿಸಿದರು.
ಮಾರ್ಗ
ಮಧ್ಯದಲ್ಲಿ, ಕಲ್ಯಾಣದ ಸೈನ್ಯ
ಶರಣರನ್ನು ಅಡ್ಡಗಟ್ಟಿ ಮಾರಣ
ಹೋಮವನ್ನು ನಡೆಸಿತು. ಆಗ
ಶರಣರಿಗೆ ಅನಿರೀಕ್ಷಿತವಾದ ಸಹಾಯ
ಒದಗಿ, ಘೋರ
ಯುದ್ದದಲ್ಲಿ ಕಲ್ಯಾಣದ ಸೈನ್ಯ
ಸೋತು
ಹಿಮ್ಮೆಟ್ಟಿತು. ಆ ಅನಿರೀಕ್ಷಿತ ಸಹಾಯ ಯಾರಿಂದ ದೊರಕಿತೆಂಬುದರ ಬಗ್ಗೆ, ವಿವರಣೆಗಳು ಲಭ್ಯವಿಲ್ಲ. ಡಾ.ಎಚ್. ತಿಪ್ಪೇರುದ್ರಸ್ವಾಮಿಯವರು ತಮ್ಮ ಅಳಿವಿನಿಂದ ಉಳಿವಿಗೆ ಕಾದಂಬರಿಯಲ್ಲಿ ಕೆಲವು
ವಿವರಣೆಗಳನ್ನು ಒದಗಿಸಲು ಪ್ರಯತ್ನಿಸಿದ್ದಾರೆ. ನಂತರ
ಚನ್ನಬಸವಣ್ಣ ನವರು
ಹೆಚ್ಚುಕಾಲ ಬದುಕಲಿಲ್ಲ ಉಳವಿಯಲ್ಲಿಯೇ ಅವರು
ಶಿವೈಕ್ಯರಾದರು. ಹೀಗೆ
ಚನ್ನಬಸವಣ್ಣ ಬದುಕಿದ್ದು ಸ್ವಲ್ಪ
ಕಾಲವೇ
ಆದರೂ;
ಸಾಧಿಸಿದ್ದು, ಕೀರ್ತಿಶಾಲಿಯಾದದ್ದು ತುಂಬಾ
ಹೆಚ್ಚು.
ಚೆನ್ನಬಸವಣ್ಣ ಕೂಡಲ
ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ
ಪ್ರತಿಭಾಸಂಪನ್ನರಾದನರು ಕಲ್ಯಾಣಕ್ಕೆ ಬಂದ
ನಂತರ
ಬಸವಣ್ಣನ ಮಹಾಮನೆಯ ಕಾರ್ಯದಲ್ಲಿ ನೆರವಾಗಿ ಧರ್ಮೊದ್ಧಾರ ಕಾರ್ಯಗಳಲ್ಲಿ ಸಹಯಕರಾದವರು. ಅನುಭವ
ಮಂಟಪದ
ಎಲ್ಲಾ
ಕಾರ್ಯಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ನಡೆಯುತ್ತಿದ್ದವು. ಅಲ್ಲಮ
ಪ್ರಭುವಿನ ಅಪ್ಪಣೆ
ಮೇರೆಗೆ
ಕಲ್ಯಾಣಕ್ಕೆ ಬಂದ
ಸಿದ್ಧರಾಮನಿಗೆ ಲಿಂಗಧಾರಣೆ ಮಾಡಿದ
ಮಹಾಮಹಿಮಶಾಲಿ. ಈತ
ಅನುಭವ
ಮಂಟಪಕ್ಕೆ ಬಂದ
ಅಕ್ಕಮಹಾದೇವಿಯ ದಿವ್ಯತ್ವವನ್ನು ಗ್ರಹಿಸಿ ಶಿವಯೋಗ
ಶಕ್ತಿಯನ್ನು ಅರಿತ
ಅವರು
ಆಕೆಯನ್ನು ಹೀಗೆ
ಸ್ತುತಿಸಿದ್ದಾರೆ.
“ ಅಜಕೋಟಿ ವರುಷದವರೆಲ್ಲರೂ ಹಿರಿಯರೇ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ
ನಮ್ಮ ಮಹಾದೇವಿಯಕ್ಕಂಗಾಯ್ತು.”
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ
ನಮ್ಮ ಮಹಾದೇವಿಯಕ್ಕಂಗಾಯ್ತು.”
ಚೆನ್ನಬಸವಣ್ಣ ಶಿವಪಥದಲ್ಲಿ ಆಚಾರ್ಯರಾಗಿದ್ದಂತೆಯೇ ರಾಜನೀತಿಶಾಸ್ತ್ರಜ್ಞರಾಗಿದ್ದರು, ಶೂನ್ಯಪೀಠದ ಅಧ್ಯಕ್ಷರಾದರು (ಪ್ರಭುದೇವರ ಅನಂತರ ಚನ್ನಬಸವಣ್ಣ ಶೂನ್ಯಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ). ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ
ಮತ
ಪ್ರಕ್ರಿಯೆಗಳನ್ನು ರೂಪಿಸಿದರು. ಅವರು
1500 ಕ್ಕೂ
ಹೆಚ್ಚು
ವಚನಗಳನ್ನು ರಚಿಸಿರುವರು. ಕಲ್ಯಾಣ
ಕ್ರಾಂತಿಯ ನಂತರ
ಶರಣರನ್ನು ಮತ್ತು
ವಚನ
ಸಂಪತ್ತನ್ನು ರಕ್ಷಿಸುವ ಹೊಣೆಹೊತ್ತು ಹೋರಾಡಿ
ಕೊನೆಗೆ
ಅವರು
ಉಳವಿಯಲ್ಲಿ ಲಿಂಗೈಕ್ಯರಾದರು. ಅವರ
ವಚನವೊಂದರಲ್ಲಿ ದೇವರ
ನಿಲುವನ್ನು ಈ
ರೀತಿ
ಹೇಳಿದ್ದಾರೆ.
“ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡ ಚೆನ್ನಸಂಗಯ್ಯ ನಿಮ್ಮ ನಿಲುವು.”
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡ ಚೆನ್ನಸಂಗಯ್ಯ ನಿಮ್ಮ ನಿಲುವು.”
ಗವಿಮಠ: ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ಲಿಂಗಾಯತ ಸಾಧಕರು ವಾಸವಾಗಿದ್ದರು ಎನ್ನಲಾಗುತ್ತದೆ. ಇಲ್ಲಿ ಅಕ್ಕನಾಗಮ್ಮ ವಾಸಿಸಿದ ಗವಿ ಇದೆ ಎನ್ನುತ್ತಾರೆ.
ಉಳವಿ:
ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರು ಅಂತರ್ಜಾತಿ ಮದುವೆ ನಡೆಸಿದಾಗ ಕಲ್ಯಾಣ ಕ್ರಾಂತಿಯಾಗಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು. ಬಸವಣ್ಣನವರ ಅಳಿಯ ಚನ್ನಬಸವಣ್ಣ,ಅಕ್ಕ ನಾಗಲಾಂಬಿಕೆ ಹಾಗೂ ಇತರ ಶರಣರ ದಂಡು ಕಟ್ಟಿಕೊಂಡು ಸುರಕ್ಷಿತ ಜಾಗ ಹುಡುಕಿ ಹೊರಟರು. ಶರಣರು ರಚಿಸಿದ ವಚನ ಸಾಹಿತ್ಯದ ಗಂಟುಗಳು ಈ ಶರಣರ ಹೆಗಲ ಮೇಲಿದ್ದವು. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಹೊರಟ ಇವರು ತಲುಪಿದ್ದು ದೂರದ ಗೋವಾ ಬಳಿಯ ಕಾಡಿನ ಬೆಟ್ಟದ ಹತ್ತಿರ ಬಂದು ಉಳಿದು ಕೊಂಡರು (ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು). ಬಿಜ್ಜಳನ ಸೈನಿಕರ ಜೊತೆ ಹೊಡೆದಾಡುತ್ತಲೇ ಈ ಜಾಗಕ್ಕೆ ಅವರು ಬಂದು ಮುಟ್ಟಿದ್ದರು. ಅಲ್ಲೇ ಲಿಂಗೈಕ್ಯರಾದರು. ಅಲ್ಲಿಯೇ ಚನ್ನಬಸವಣ್ಣನವರ ಸಮಾಧಿ ಯನ್ನು ಕಟ್ಟಲಾಗಿದೆ. ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ.
ಶರಣರು ಬಂದು “ಉಳಿ”ದುಕೊಂಡದ್ದರಿಂದ ಈ ಸ್ಥಳವು “ಉಳವಿ” ಅಂತ ಆಯಿತು (ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು). ಈ ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಂದು ಅದುವೇ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಾಗಿದೆ.
ಶರಣರು ಬಂದು “ಉಳಿ”ದುಕೊಂಡದ್ದರಿಂದ ಈ ಸ್ಥಳವು “ಉಳವಿ” ಅಂತ ಆಯಿತು (ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು). ಈ ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಂದು ಅದುವೇ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಾಗಿದೆ.
ಹರಳಯ್ಯನವರ ಚಿಲುಮೆ:
ಬಿಜ್ಜಳನು ಹರಳಯ್ಯನವರನ್ನು ಅನೆ ಕಾಲಿಗೆ ಕಟ್ಟಿ ಎಳೆಸಿದಾಗ ಅವರು ಲಿಂಗೈಕ್ಕ್ಯರಾಗುತ್ತಾರೆ. ನಂತರ ಬಿಜ್ಜಳನ ಸೈನ್ಯ ಮತ್ತು ಜಾತಿ ವಾದಿಗಳು ವಚನಗಳನ್ನು ನಾಶಪಡಿಸಲು ಮುಂದಾಗುತ್ತಾರೆ. ಶರಣರು ವಚನ ಸಾಹಿತ್ಯದ ರಕ್ಷಣೆಗಾಗಿ ಉಳವಿ ತಲುಪುತ್ತಾರೆ. ಅಲ್ಲಿರುವ ಒಂದು ಚಿಲುಮೆಗೆ ಹುತಾತ್ಮರಾದ ಹರಳಯ್ಯನವರ ಹೆಸರಿಡುತ್ತಾರೆ. ಆ ನೀರಿನ ಚಿಲುಮೆ ಇನ್ನು ಇದೆ, ಅದುವೇ ಹರಳಯ್ಯನವರ ಚಿಲುಮೆ.
ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು:
ಕಲ್ಯಾಣದ ಕ್ರಾಂತಿ ಆದಾಗ ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು. ಉಳವಿಯ ಬಸವಣ್ಣನ ಗುಡಿಯ ಮುಂಬಾಗ ಈಗ ವೀರಗಲ್ಲನ್ನು ಕಾಣಬಹುದು. ವಚನ ಕ್ರಾಂತಿಗೆ ಯುದ್ದದ ಮಾಹಿತಿಗೆ ಮುನ್ನುಡಿಗೆ ಪುಷ್ಟಿ ಮತ್ತು ಆಧಾರ ನೀಡುವಂತಹದು.
ಇಂದು ಇದು ಲಿಂಗಾಯತ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ.
ಉಳುವಿಗೆ ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಬರಲು ಎರಡು ಅರಣ್ಯ ಮಾರ್ಗಗಳಿವೆ. ೧೨ ನೇ ಶತಮಾನದಲ್ಲಿ ಚನ್ನಬಸವಣ್ಣನವರು ಲಿಂಗೈಕ್ಯ ಆಗುವ ಮೊದಲು ಕಲ್ಯಾಣ ದಿಂದ ಉಳವಿಗೆ ಬಂದರು. ತಾಯಿ ಅಕ್ಕನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿ ಹತ್ತಿರದಲ್ಲಿ ಇದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.
ಉಳವಿಯು ಪಶ್ಚಿಮ ಘಟ್ಟಗಳಲ್ಲಿ ಇದ್ದು ಇಲ್ಲಿನ ದಟ್ಟ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಸಾರಂಗ, ನಾಗರಹಾವು ಮತ್ತು ಇತರ ವನ್ಯಜೀವಿಗಳಿವೆ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ
No comments:
Post a Comment