ಕದಿರ ರೆಮ್ಮವ್ವೆ
ಕದಿರ ರೆಮ್ಮವ್ವೆ ಅವಿರಳ ವಚನಕಾರ್ತಿ.
ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ಕಲ್ಯಾಣ
ಕ್ರಾಂತಿಯಲ್ಲಿ ಪಾಲ್ಗೊಂಡಿದ್ದ ರೆಮ್ಮವ್ವ, ರಾಟಿಯಿಂದ ಕದಿರು
ತೆಗೆದು ನೂಲುವ ಕಾಯಕವನ್ನು ಮಾಡುತ್ತಿದ್ದಳು.
ಹಾಗೆ ತೆಗೆದ ನೂಲನ್ನು ಮಾರಿ,
ಬಂದ ಹಣದಲ್ಲಿ ಗುರು
ಲಿಂಗ ಜಂಗಮ ದಾಸೋಹ ಮಾಡಿ
ಶರಣ ಬದುಕು ಸವೆಸಿದವಳು
ರೆಮ್ಮವ್ವೆ.
ರೆಮ್ಮವ್ವೆಯ
ಕಾಲಮಾನದ ಕುರಿತು ಅನೇಕ ಚರ್ಚೆಗಳಾಗಿವೆ.
ಬಹುತೇಕರು ಈಕೆಯ ಕಾಲವನ್ನು ಬಸವಾದಿ
ಪ್ರಮಥರ ಕಾಲವೆಂದು ನಿರ್ಣಯಿಸುತ್ತಾರೆ. ಡಾ
ಎಲ್ ಬಸವರಾಜು ಅವರು
ರೆಮ್ಮವ್ವೆಯ ವಚನದಲ್ಲಿ ಬರುವ ‘ಪರದಳ
ವಿಭಾಡ’, ‘ಗಜವೇಂಟೆಕಾರ’ ಎಂಬ ಪದಗಳನ್ನು ಗಮನಿಸಿ
ಇವಳು ವಿಜಯನಗರದ ಕ್ರಿ.ಶ.
1430ರ ಕಾಲದ ವಚನಕಾರ್ತಿ ಎಂದು
ತೀರ್ಮಾನಿಸುತ್ತಾರೆ. ಆದರೆ ಹರಿಹರ ತನ್ನ
ರಗಳೆಯಲ್ಲಿ ಕದಿರ ರೆಮ್ಮವ್ವೆಯನ್ನು ಸ್ಮರಿಸಿದ್ದಾನೆ.
ಪಾಲ್ಗುರಿಕೆ ಸೋಮನಾಥನ ‘ಪಂಡಿತಾರಾಧ್ಯ ಚರಿತ್ರೆ’ಯಲ್ಲಿ ಕದಿರ ರೆಮ್ಮವ್ವೆ
ಶರಣೆಯ ಉಲ್ಲೇಖವಿದೆ. ಅಲ್ಲದೆ ಕದಿರು ಕಾಯಕದ
ರೆಮ್ಮವ್ವೆಯು ತನ್ನ ಒಂದು ವಚನದಲ್ಲಿ
ಬಸವಣ್ಣ, ಚೆನ್ನ ಬಸವಣ್ಣ ಮತ್ತು
ಪ್ರಭುದೇವರನ್ನು ಸ್ಮರಿಸಿದ್ದಾಳೆ. ಈಕೆಯ ವಚನಗಳು ಶರಣರ
ವಚನಗಳ ಜೊತೆ ಮತ್ತು ಸಕಲ
ಪುರಾತನರ ವಚನಗಳು ಹಾಗೂ ಇತರ
ಸ್ಥಲ ಕಟ್ಟಿನ ವಚನಗಳಲ್ಲಿ ಸಮಾವೇಶಗೊಂಡಿರುವುದನ್ನು
ಗಮನಿಸಿದರೆ ಕದಿರು ರೆಮವ್ವೆ ಬಸವ
ಕಾಲದ ಶರಣೆ ಎನ್ನಲು ಹೆಚ್ಚು
ಪುಷ್ಟಿ ಸಿಗುತ್ತದೆ. ಕ್ರಿ.ಶ 1620 ರ
ಶಂಕರದೇವನ ‘ಇಷ್ಟಲಿಂಗ ಚಾರಿತ್ರ್ಯ’ ಮತ್ತು
ಅಜ್ಞಾತ ಕವಿಯ ‘ನೂರೆಂಟು ಶರಣೆಯರ
ಅಷ್ಟಕ’ದಲ್ಲಿ ಕದಿರ ರೆಮ್ಮವ್ವೆಯ
ಉಲ್ಲೇಖ ಕಂಡುಬಂದಿದೆ. ಹೀಗಾಗಿ ಕದಿರ ರೆಮ್ಮವ್ವೆ
ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ
ಸಂಕುಲಕೆ ಸೇರಿದ ಶರಣೆ ಎಂದು
ಗಟ್ಟಿಯಾಗಿ ನಿರ್ಧರಿಸಬಹುದು.
ಸತ್ಯ ಶುದ್ಧ ಶರಣೆಯಾದ ಕದಿರ
ರೆಮ್ಮವ್ವೆ ಒಬ್ಬ ನಿಷ್ಠಾವಂತ ನೇಕಾರ
ಕುಟುಂಬದ ಕಾಯಕಜೀವಿ. ರಾಟಿಯಿಂದ ನೂಲು
ತೆಗೆಯುವುದು, ನೂಲನ್ನು ಮಾರಿ ಬಂದ
ಆದಾಯದಿಂದ ಜಂಗಮ ಸೇವೆ ಕೈಗೊಳ್ಳುವುದು
ಆಕೆಯ ಪ್ರೀತಿಯ ಕಾಯಕವಾಗಿತ್ತು. ಇವಳ
ಗಂಡನ ಬಗ್ಗೆ ಯಾವುದೇ ದಾಖಲೆಗಳು
ದೊರೆತಿಲ್ಲ. ತನ್ನ ಕಾಯಕದ ಜೊತೆಗೆ
ನಿತ್ಯ ಅನುಭಾವದ ಗೋಷ್ಠಿಯಲ್ಲಿ ಪಾಲ್ಗೊಂಡು
ಲೌಕಿಕ ಮತ್ತು ಪಾರಮಾರ್ಥಿಕ ಚಿಂತನೆಗಳಲ್ಲಿ
ರೆಮ್ಮವ್ವೆ ಭಾಗವಹಿಸುತ್ತಿದ್ದಳು.
ಕದಿರ ರೆಮ್ಮವ್ವೆಯ ನಾಲ್ಕು ವಚನಗಳು ಮಾತ್ರ
ದೊರೆತಿವೆ. ‘ಕದಿರ ರೆಮ್ಮಿವೊಡೆಯ ಗುಮ್ಮೇಶ್ವರ’
ಆಕೆಯ ವಚನಾಂಕಿತ. ನಾಲ್ಕು ವಚನಗಳಲ್ಲಿ
ಎರಡು ವಚನಗಳು ಸತಿ ಪತಿ
ದಾಂಪತ್ಯ ಧರ್ಮಕ್ಕೆ ಸಂಬಂಧ ಪಟ್ಟ
ಅಲೌಕಿಕ ವಿಚಾರಗಳು, ಒಂದು ವಚನದಲ್ಲಿ
ಶರಣರ ಸ್ತುತಿ ಕಂಡು ಬಂದಿದೆ.
ಇನ್ನೊಂದರಲ್ಲಿ ಕಾಯಕದ ಮಹತ್ವ ಅಡಕವಾಗಿದೆ.
ರೆಮ್ಮವ್ವೆ
ಅಲ್ಲಮ ಪ್ರಭುವಿನ ಗರಡಿಯಲ್ಲಿ ಬೆಳೆದವಳು.
ಕದಿರ ರೆಮ್ಮವ್ವೆಯ ವಚನಾಂಕಿತ ಗುಮ್ಮೆಶ್ವರ. ತನ್ನ ಒಂದು ವಚನದಲ್ಲಿ
ತಾನು ಗುರು ಅಲ್ಲಮರ ಕಾರುಣ್ಯವೆಂದು
ಹೇಳಿಕೊಂಡಿದ್ದಾಳೆ.
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ.
ಕಲ್ಯಾಣ ಕ್ರಾಂತಿಯ ಮೊದಲು ಮತ್ತು
ನಂತರ ಕೆಲ ಶರಣರು ಕಲ್ಯಾಣವನ್ನು
ತೊರೆದರು ಎಂದು ನಮಗೆ ತಿಳಿದು
ಬರುತ್ತದೆ. ಹೀಗೆ ಕ್ರಾಂತಿಯ ಮೊದಲೆ
ಕಲ್ಯಾಣ ತೊರೆದವರಲ್ಲಿ ಅಕ್ಕ ಮಹಾದೇವಿ ಮತ್ತು
ಅಲ್ಲಮರು ಪ್ರಮುಖರು. ಕಲ್ಯಾಣ ತೊರೆದು ಶ್ರೀಶೈಲದ
ಕಡೆಗೆ ಹೋಗುವ ಮಾರ್ಗದಲ್ಲಿ ಅಲ್ಲಮರು
ತೇರದಾಳದಲ್ಲಿ ತಂಗಿದರು. ಇವರ ಆಪ್ತ
ವಲಯದ ಶಿಷ್ಯರಲ್ಲಿ ಒಬ್ಬರಾಗಿದ್ದ ರೆಮ್ಮವ್ವೆ, ಅಲ್ಲಮರ ಜೊತೆಗೆ ಹೊರಟು
ನಿಂತು ಅವರ ಆದೇಶದಂತೆ ತೇರದಾಳ
ಪಕ್ಕದಲ್ಲಿರುವ ರಬಕವಿ (ರೆಬ್ಬೆವ್ವನ ಗವಿ)ಗೆ ಬರುತ್ತಾಳೆ.
ಅಲ್ಲಿ ನಿಂತು ಜನರಿಗೆ ಶರಣ
ತತ್ವ ಸಂದೇಶ ಸಾರುತ್ತ ತನ್ನ
ಕಾಯಕದೊಂದಿಗೆ ಸೇವೆಗೈದು ಕೊನೆಗೆ ಅಲ್ಲಿಯೇ
ಐಕ್ಯಳಾಗುತ್ತಾಳೆ. ಕದಿರ ರೆಮ್ಮವ್ವೆ (ರೆಬ್ಬವ್ವೆ)
ಸಮಾಧಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ
ತಾಲೂಕಿನ ರಬಕವಿಯಲ್ಲಿ ಕಂಡು ಬಂದಿದೆ.
ರೆಮ್ಮವ್ವೆಯ
ಇನ್ನೊಂದು ಹೆಸರು ರೆಬ್ಬವ್ವೆ. ಹೀಗಾಗಿ
ರೆಬ್ಬೆವ್ವನ ಗವಿಯು ಕಾಲಕ್ರಮೇಣ ರಬಕವಿಯಂತಾಗಿದೆ.
ರೆಬ್ಬವ್ವೆಯ ಕದಿರು ತೆಗೆಯುವ ಕಾಯಕದ
ಪ್ರಭಾವದಿಂದ ಇಂದಿಗೂ ರಬಕವಿ ಬನಹಟ್ಟಿಯಲ್ಲಿ
ಪ್ರತಿಶತ ಐವತ್ತರಷ್ಟು ಜನ ನೇಯ್ಗೆ
ಕದಿರು ಕಾಯಕವನ್ನು ಮಾಡಿ ಜೀವನ
ಸಾಗಿಸುತ್ತಿದ್ದಾರೆ. ಹೀಗಾಗಿ ಕದಿರ ರೆಮ್ಮವ್ವೆ
ಇಲ್ಲಿಯೇ ಐಕ್ಯರಾಗಿರಲು ಎಲ್ಲ ಸಾಧ್ಯತೆಗಳಿವೆ.
--
ಎನ್ನ ಸ್ಥೂಲತನುವೆ ಬಸವಣ್ಣನಯ್ಯಾ.
ಎನ್ನ ಸ್ಥೂಲತನುವೆ ಬಸವಣ್ಣನಯ್ಯಾ.
ಎನ್ನ ಸೂಕ್ಷ್ಮತನುವೆ ಚೆನ್ನಬಸವಣ್ಣನಯ್ಯಾ.
ಎನ್ನ ಕಾರಣತನುವೆ ಪ್ರಭುದೇವರಯ್ಯಾ,
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
ಎನ್ನ ಕಾರಣತನುವೆ ಪ್ರಭುದೇವರಯ್ಯಾ,
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
--
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು,
ನಿಂದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು,
ನಿಂದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ
--
ಎಲ್ಲರ ಹೆಂಡಿರು ತೊಳಸಿಕ್ಕುವರು
ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ.
ಎಲ್ಲರ ಗಂಡಂದಿರಿಗೆ ಬೀಜವುಂಟು
ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ.
ಎಲ್ಲರ ಗಂಡಂದಿರಿಗೆ ಬೀಜವುಂಟು
ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
--
ಎಲ್ಲರ ಗಂಡಂದಿರು ಪರದಳವಿಭಾಡರು
ಎನ್ನ ಗಂಡ ಮನದಳವಿಭಾಡ.
ಎಲ್ಲರ ಗಂಡಂದಿರು ಗಜವೇಂಟೆಕಾರರು
ಎನ್ನ ಗಂಡ ಮನವೇಂಟೆಕಾರ.
ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು
ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.
ಎಲ್ಲರ ಗಂಡಂದಿರಿಗೆ ಮೂರು,
ಎನ್ನ ಗಂಡಂಗೆ ಅದೊಂದೆ
ಅದೊಂದೂ ಸಂದೇಹ, ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
ಎನ್ನ ಗಂಡ ಮನದಳವಿಭಾಡ.
ಎಲ್ಲರ ಗಂಡಂದಿರು ಗಜವೇಂಟೆಕಾರರು
ಎನ್ನ ಗಂಡ ಮನವೇಂಟೆಕಾರ.
ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು
ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.
ಎಲ್ಲರ ಗಂಡಂದಿರಿಗೆ ಮೂರು,
ಎನ್ನ ಗಂಡಂಗೆ ಅದೊಂದೆ
ಅದೊಂದೂ ಸಂದೇಹ, ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
ಗೊಗ್ಗವ್ವೆ
ಧೂಪದ ಹೊಗೆ ಎಂದರೆ ಭಗವಂತನಾದ ಶಿವನಿಗೆ ಬಲು ಪ್ರಿಯವಾದುದಾಗಿದೆ. ಇದನ್ನು ಅರಿತ ಶಿವಶರಣೆ ಗೊಗ್ಗವ್ವೆ ಇದೇ ಮಾರ್ಗವನ್ನು ಅನುಸರಿಸಿ ಶಿವನಿಗೆ ಪ್ರಿಯಳೆನಿಸಿ ಅವರ ದರ್ಶನವನ್ನು ಪಡೆದು ಅನುಭಾವಿ ಶಿವಶರಣೆ ಧೂಪದ ಗೊಗ್ಗವ್ವೆ ಎನಿಸಿಕೊಂಡಳು. ಗೊಗ್ಗವ್ವೆ ತಾಯಿ ತಂದೆ ಇಬ್ಬರೂ ಶಿವಭಕ್ತರು. ಶಿವನ ವರದಿಂದ ಜನಿಸಿದ ಗೊಗ್ಗವ್ವೆ ಪ್ರತಿ ದಿನ ತಪ್ಪದೆ ಶಿವಪೂಜೆಯನ್ನು ಮಾಡುತ್ತಿದ್ದಳು. ವಯಸ್ಸಿಗೆ ಬಂದ ಗೊಗ್ಗವ್ವೆಗೆ ಮದುವೆ ಮಾಡಲು ಹೆತ್ತವರು ಬಯಸುತ್ತಾರೆ. ಮದುವೆಯಾಗಲು ಬಯಸದ ಗೊಗ್ಗವ್ವೆ, ಮದುವೆಯನ್ನು ನಿರಾಕರಿಸುತ್ತಾಳೆ ಮತ್ತು ಮನೆ ತೊರೆದು ಹೋಗುವ ಆಲೋಚನೆ ಮಾಡುತ್ತಾಳೆ. ಮಗಳ ಈ ಆಲೋಚನೆಯನ್ನು ತಿಳಿದ ಹೆತ್ತವರು ಮದುವೆಯ ವಿಚಾರವಾಗಿ ಗೊಗ್ಗವ್ವೆಯನ್ನು ಬಲವಂತ ಮಾಡದೇ ಅವಳಿಚ್ಛೆಯಂತೆ ಶಿವಪೂಜೆಯಲ್ಲಿ ನಿರತಳಾಗಲು ಒಪ್ಪುತ್ತಾರೆ.
ಶಿವನ ಪೂಜೆಯಲ್ಲಿ ತಲ್ಲೀನಳಾಗಿ ಅವನನ್ನೇ ತನ್ನ ಕಣಕಣದಲ್ಲಿ ತುಂಬಿಕೊಂಡು ಆರಾಧಿಸುತ್ತಾ, ಧ್ಯಾನಿಸುತ್ತಾ ಪ್ರತಿದಿನ ಪ್ರತಿಕ್ಷಣ ಆತನ ಸೇವೆಯಲ್ಲಿದ್ದರೂ ಶಿವನು ಅವಳನ್ನು ಪರೀಕ್ಷಿಸಲು ಒಂದು ದಿನ ಅವಳಿದ್ದಲ್ಲಿಗೆ ಬರುತ್ತಾನೆ. ಸುಂದರವಾದ ರೂಪವುಳ್ಳ ಆಕರ್ಷಕ ವ್ಯಕ್ತಿತ್ವವುಳ್ಳ ಒಬ್ಬ ಯುವಕನ ವೇಷದಲ್ಲಿ ಬಂದು ತನ್ನನ್ನು ವರಿಸುವಂತೆ ಗೊಗ್ಗವ್ವೆಯನ್ನು ಕೇಳುತ್ತಾನೆ. ಗೊಗ್ಗವ್ವೆ ನಿರಾಕರಿಸಲು ತನ್ನ ಕೈಯಲ್ಲಿದ್ದ ಕತ್ತಿಯನ್ನು ತೋರಿಸುತ್ತಾ ನೀನು ನನ್ನ ಸತಿ ಆಗದಿದ್ದರೆ ನಿನ್ನನ್ನು ಇರಿದು ಕೊಲ್ಲುವೆನು ಎಂದು ಹೆದರಿಸುತ್ತಾನೆ. ಆದರೆ ಅವಳು ಆ ಬೆದರಿಕೆಗೂ ಬಗ್ಗುವುದಿಲ್ಲ, ಆಗ ಯುವಕ ತನ್ನ ಕತ್ತಿಯನ್ನು ಗೊಗ್ಗವ್ವೆಯ ಶಿರದ ಮೇಲಿಡುತ್ತಾನೆ. ಅವಳು ಕಣ್ಮುಚ್ಚಿ ಶಿವನನ್ನು ಧ್ಯಾನಿಸುತ್ತಾಳೆ. ಗೊಗ್ಗವ್ವೆಯ ಭಕ್ತಿಗೆ ಮೆಚ್ಚಿದ ಶಿವನು ತನ್ನ ನಿಜ ರೂಪದಲ್ಲಿ ಪ್ರತ್ಯಕ್ಷನಾಗಿ, ಸ್ವತಃ ತಾನೇ ಗುರುವಾಗಿ ವೀರಶೈವ ಉಪದೇಶವನ್ನು ನೀಡುತ್ತಾನೆ.
ಶರಣೆಯರು ತಮ್ಮ ಆತ್ಮೋದ್ಧಾರ ಮಾತ್ರವಲ್ಲದೇ ಪರರ ಆತ್ಮೋದ್ಧಾರದ ಅಭಿಲಾಷೆಯನ್ನು ಪೂರೈಸಲು ಮಾರ್ಗದರ್ಶನವನ್ನು ನೀಡುತ್ತಿದ್ದರು. ಕೇರಳ ದೇಶದ ದೊರೆಯೊಬ್ಬ ಕೈಲಾಸ ಹುಡುಕಲು ಹೊರಡುತ್ತಾನೆ. ಅವನಿಗೆ ಗೊಗ್ಗವ್ವೆ ತನ್ನ ನಿತ್ಯ ಪೂಜದ ಧೂಪದ ಹೊಗೆಯ ಮಹಿಮೆಯಲ್ಲಿ ಕೈಲಾಸವನ್ನು ತೋರಿಸಿ, ಸತ್ಯೋಪದೇಶವನ್ನು ಮಾಡುತ್ತಾಳೆ.
ಕೇರಳದ ಅವಲೂರು ಈಕೆಯ ಸ್ಥಳ.
ಕಾಲ ೧೧೬೦. ಧೂಪದ
ಕಾಯಕದವಳಾದುದರಿಂದ 'ಧೂಪದ ಗೊಗ್ಗವ್ವೆ' ಎಂದೂ
ಪ್ರಸಿದ್ಧಳಾಗಿದ್ದಾಳೆ. ಶಿವ ಮೋಹಿತಳಾದ ಈಕೆ
ಲೌಕಿಕ ಮದುವೆಯನ್ನು ನಿರಾಕರಿಸಿ ವಿರಾಗಿಣಿಯಾಗಿ ಕಲ್ಯಾಣಕ್ಕೆ
ಬರುತ್ತಾಳೆ. 'ನಾಸ್ತಿನಾಥಾ' ಅಂಕಿತದಲ್ಲಿ ೬ ವಚನಗಳನ್ನು
ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ,
ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ
ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ
ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ
ಸೆಳೆಯುತ್ತವೆ.
ಗೊಗ್ಗವ್ವೆಯ ವಚನಗಳು:
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯ ಬೇಕು
ಈ ಎರಡು ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತೇನಾಥನು ಪರಿಪೂರ್ಣನೆಂಬ.
--
ಅನಲಕೊಂಡ ಭೋಗಕ್ಕೆ ಪರಿಪ್ರಕಾರವುಂಟೆ ?
ಶರದಿಕೊಂಡ
ಸಾಗರಕ್ಕೆ ಕುರುಹಿನ ತಲೆಯೆ ?
ಲಿಂಗಮುಟ್ಟಿದ
ಅಂಗಕ್ಕೆ ಮತ್ತೆ ಪುಣ್ಯವುಂಟೆ ?
ಹುಸಿ, ನಾಸ್ತಿನಾಥ.
--
ಉದ್ದವನೇರುವುದಕ್ಕೆ
ಗದ್ದುಗೆಯಿಲ್ಲದೆ ಎಯ್ದಬಾರದು.
ಚಿದ್ರೂಪನನರಿವುದಕ್ಕೆ
ಅರ್ಚನೆ ಪೂಜನೆ
ನಿತ್ಯನೇಮವಿಲ್ಲದೆ
ಕಾಣಬಾರದು.
ಅದ ಸತ್ಯದಿಂದ ಮಾಡಿ ಅಸತ್ಯವ
ಮರೆದಡೆ
ಇದೇ ಸತ್ಯ ನಾಸ್ತಿನಾಥ.
ಚಿದ್ರೂಪನನರಿವುದಕ್ಕೆ
ಅರ್ಚನೆ ಪೂಜನೆ
ನಿತ್ಯನೇಮವಿಲ್ಲದೆ
ಕಾಣಬಾರದು.
ಅದ ಸತ್ಯದಿಂದ ಮಾಡಿ ಅಸತ್ಯವ
ಮರೆದಡೆ
ಇದೇ ಸತ್ಯ ನಾಸ್ತಿನಾಥ.
--
ಭಕ್ತರು ಜಂಗಮದಲ್ಲಿ ಕಟ್ಟಿ ಹೋರಲೇಕೆ
?
ಧೂಪದ ಹೊಗೆ ಎತ್ತ ಹೋದಡೂ
ಸರಿ.
ಇದು ಸತ್ಯವೆಂದೆ ನಾಸ್ತಿನಾಥಾ.
--
ಮಾರುತನಲ್ಲಿ
ಬೆರೆದ ಗಂಧದಂತೆ,
ಸುರತದಲ್ಲಿ
ಬೆರೆದ ಸುಖದಂತೆ,
ಮಚ್ಚಿದಲ್ಲಿ
ಕೊಡುವ ಉಚಿತದಂತೆ,
ಭಕ್ತರಿಗದೆ
ಹಾದಿ ಎಂದೆ ನಾಸ್ತಿನಾಥ.
--
ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಮೀಸೆಕಾಸೆ
ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ
ಹೆಣ್ಣೊ ಗಂಡೊ ನಾಸ್ತಿನಾಥಾ?
No comments:
Post a Comment