ಉರಿಲಿಂಗಪೆದ್ದಿಯ
ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು
ಮಾಹಿತಿ ಲಭ್ಯವಿಲ್ಲ. ಇಂತಹ ಅನೇಕ ಕಿರು
ವಚನಕಾರರ ಬಗೆ ಇರುವಂತೆಯೇ ಇವನ
ಬಗ್ಗೆಯೂ ನಮಗೆ ದೊರಕುವ ಅಲ್ಪ
ಮಾಹಿತಿಯು, ಪೌರಾಣಿಕ ಸ್ವರೂಪದ್ದಾದರೂ, ಸಿಕ್ಕುವುದು
'ಭೈರವೇಶ್ವರಕಾವ್ಯ'ದಲ್ಲಿ ಮತ್ತು ಅದರ
ವಿವರಣೆಯಂತಿರುವ `ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ'ದಲ್ಲಿ. ಕಾವ್ಯದಲ್ಲಿ ಬರುವ:
"ಉರಿಲಿಂಗದೇವರಿ
ತ್ತುಱೆ ಪೆದ್ದಣ್ಣಯ್ಯನ
ಕರದ ಜ್ಯೋತಿರ್ಲಿಂಗದಂತೆ"
ಎಂಬ ಪದ್ಯಕ್ಕೆ ವಿವರಣೆಯಾಗಿ 'ಭೈರವೇಶ್ವರ
ಕಾವ್ಯದ ಕಥಾಮಣಿಸೂತ್ರರತ್ನಾಕರ'ದಲ್ಲಿ ಒಂದು ಕತೆಯನ್ನು
ಕೊಡಲಾಗಿದೆ. ಅವಸೆ ಕಂಧಾರ ಎಂಬುದು
ಒಂದು ಪಟ್ಟಣ. ಅದರಲ್ಲಿ ಉರಿಲಿಂಗದೇವ
ಎಂಬ ಆಚಾರ್ಯನೊಬ್ಬ ವೀರಶೈವಾಚಾರಮತದ
ಗುರುವಾಗಿದ್ದ. ಅವನು ಭಕ್ತಜನಕ್ಕೆ ಉಪದೇಶ
ಮಾಡುತ್ತಿದ್ದ. ಅವನು ಇಪ್ಪತ್ತೊಂದು ಗುರುಸಂಪ್ರದಾಯಕ್ಕೆ
ಯೋಗ್ಯನಾಗಿ ಒಮ್ಮೆ ನಂದ್ಯವಾಡದಲ್ಲಿ ಸೂರಯ್ಯ
ಎಂಬ ಭಕ್ತನಿಗೆ ಅವನ
ಮನೆಯಲ್ಲಿ ಉಪದೇಶವನ್ನು ಮಾಡುತ್ತಿದ್ದ. ಪಂಚಕಳಸ ದೀಕ್ಷಾಮಂಟಪ ರಂಗವಾಲೆ
ಮುಂತಾದ ಮುಖ್ಯವಾದ ಪರಿಕರಗಳ ನಡುವೆ
ಈ ಕಾರ್ಯ ಸಂಭ್ರಮದಿಂದ
ನಡೆಯುತ್ತಿತ್ತು. ಅದೇ
ಹೊತ್ತಿಗೆ ಸೂರಯ್ಯನ ಮನೆಯಲ್ಲಿ ಪೆದ್ದಣ್ಣನೆಂಬುವನೂ
ಒಬ್ಬ ಇದ್ದ. ಅಂದು ರಾತ್ರಿ
ತಾನು ಕಳ್ಳತನ ಮಾಡಲು ಹೋಗುವೆನೆಂದುಕೊಂಡು
ಹೊರಟ. ಆದರೆ ಕುತೂಹಲದಿಂದಲೋ ಏನೋ
ಕಳ್ಳತನಕ್ಕೆ ಹೋಗದೆ, ಸೂರಯ್ಯನ ಮನೆಯ
ಮಾಳಿಗೆಯನ್ನೇರಿ (ಗವಾಕ್ಷಿಯ ಮೂಲಕ) ಮನೆಯೊಳಗೆ
ನೋಡಿದ. ಉರಿಲಿಂಗದೇವನು ಉಪದೇಶ ಮಾಡುವ ಮೊದಲು
ಶಿವಪೂಜೆಗೆ ತೊಡಗಿದ್ದ. ತಾನು ಮಾಡುವ
ಪೂಜೆ ಇತರರಿಗೆ ಕಾಣಬಾರದೆಂದು ಅವನು
ಕೋಣೆಯ ಬಾಗಿಲನ್ನು ಮುಚ್ಚಿಕೊಂಡಿದ್ದ. ಅಷ್ಟವಿಧಪೂಜೆ,
ಷೋಡಶೋಪಚಾರಗಳನ್ನು ಪೂರೈಸಿದ ಮೇಲೆ ಅವನ
`ಶರಣಸತಿ ಲಿಂಗಪತಿ' ಮನೋಭಾವಕ್ಕನುಗುಣವಾಗಿ ಲಿಂಗವು
ಪುರುಷರೂಪವನ್ನು ಧರಿಸಿತು, ಉರಿಲಿಂಗದೇವನು ಸತಿಯ
ರೂಪ ತಾಳಿದ. ಪೂಜೆ
ಮುಂದುವರೆಯಿತು. "ಉರಿಲಿಂಗದೇವನೆ ಚಲುವನು, ಉರಿಲಿಂಗದೇವನೆ ಗರುವನು,
ಉರಿಲಿಂಗದೇವನೆ ಹಿರಿಯನು" ಎಂದು ಮುಂತಾಗಿ ಗುರು
ಹಾಡಿದ. ಅನಂತರ "ಕಾಮಿ ಉರಿಲಿಂಗದೇವ, ಕಾಮಿನಿ
ನಾನು, ಎರಡು ಗುರಿ ಒಂದಾಗುವಂತೆ
ಸರಳೆಸುಗೆಯ ಮಾಡು ಕಂಡಾ ಕಾಮಾ!
ನೀನು ಬಿಲ್ಲುಗಾರನಹೆ, ಸರಳೆರಡು ಒಂದಪ್ಪುದು ಕಂಡಾ
ಕಾಮಾ! ಎನಗೆಯು ಉರಿಲಿಂಗದೇವಂಗೆಯು ತೊಟ್ಟೆಸೆಯೆ
ಅಸುವೊಂದಾದೊಡೆ ಬಿಲ್ಲಾಳು ನೀನಹೆಯಲೋ ಕಾಮಾ!"
ಎಂದು ಲಿಂಗಪೂಜೆಯಲ್ಲಿ ದಶಾವಸ್ಥೆಯಿಂದ ವಚನವನ್ನು ಹಾಡಿದ. ಲಿಂಗಪೂಜೆ
ಮುಗಿಯಿತು. ತಾನು ದೀಕ್ಷಾಮಂಟಪಕ್ಕೆ ಮರಳಿದ. ಇದನ್ನೆಲ್ಲ
ಪೆದ್ದಣ್ಣ ಮಾಳಿಗೆಯಿಂದ ನೋಡಿದ; ಗುರು ಶಿಷ್ಯನಿಗೆ
ದೀಕ್ಷೆ ನೀಡುವ ಕ್ರಮವನ್ನೆಲ್ಲ ಮಾಳಿಗೆಯಿಂದಲೇ
ಅವನು ಗಮನಿಸಿದ್ದ. ಕೊನೆಯಲ್ಲಿ ಶಿಷ್ಯರು ಉರಿಲಿಂಗದೇವನಿಗೆ
ನಮಸ್ಕಾರ ಮಾಡುವುದನ್ನು ಕಂಡ. ತಾನೂ ಶರಣು
ಎನ್ನುತ್ತ ಮಾಳಿಗೆಯಿಂದ ಇಳಿದು ಬಂದ.
ಬೆಳಗಾಯಿತು. ಪೆದ್ದಣ್ಣ ಉರಿಲಿಂಗದೇವನ ಮನೆಗೆ ಬಂದ. ಅವನು ಹೇಳದಿದ್ದರೂ ತಾನಾಗಿಯೇ ಅವನಿಗೆಂದು ಒಂದು ಹೊರೆ ಹುಲ್ಲು, ಒಂದು ಹೊರೆ ಕಟ್ಟಿಗೆಯನ್ನು ತಂದು ಹಾಕಿದ. ಅಂದು ಮಾತ್ರವಲ್ಲ, ಇದನ್ನು ಪ್ರತಿನಿತ್ಯ ಮಾಡುತ್ತ ಬಂದ. ಹೀಗೇ ಕೆಲವು ದಿನಗಳು ಕಳೆದವು. ಒಂದು ದಿನ ಉರಿಲಿಂಗದೇವನು, "ನಿನಗೇನು ಬೇಕು? ಇದುವರೆಗೆ ಹುಲ್ಲು ಕಟ್ಟಿಗೆ ಹೊರೆಗಳನ್ನು ತಂದು ಹಾಕಿದುದರ ಬಾಬ್ತು ಹಣವನ್ನು ತೆಗೆದುಕೋ, ಮತ್ತೆ ಈ ಕಡೆ ಬರಬೇಡ, ಅಂಗಳದಲ್ಲಿಯೇ ನಿಂತುಕೊ" ಎಂದು ಗದರಿಸಿದ. ತನಗೆ ಲಿಂಗದೀಕ್ಷೆ ಕೊಡಲು ಸಾಧ್ಯವಿಲ್ಲದ್ದರಿಂದ ಬರಬೇಡವೆಂದು ಹೇಳುತ್ತಿದ್ದಾನೆ ಎಂಬುದಾಗಿ ಪೆದ್ದಣ್ಣ ಅರ್ಥಮಾಡಿಕೊಂಡ. ಆದರೆ ಹುಲ್ಲು-ಕಟ್ಟಿಗೆ ಹೊರೆಗಳನ್ನು ತಂದುಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ. ಹೀಗೆಯೇ ಮತ್ತೆ ಕೆಲವು ದಿನಗಳು ಸಂದವು. ಮುಂದೆ ಒಂದು ದಿನ ಕಟ್ಟಿಗೆಯನ್ನು ತಂದಾಗ ಉರಿಲಿಂಗದೇವನು ಮತ್ತೆ, "ನಿನಗೆ ಏನು ಬೇಕು?" ಎಂದು ಕೇಳಿದ. ಆಗ ಪೆದ್ದಣ್ಣನು, "ಸ್ವಾಮಿ, ನಂದಿವಾಡದ ಸೂರಭಕ್ತನಿಗೆ ದೀಕ್ಷೆಯನ್ನು ನೀಡಿದಂತೆ ನನಗೂ ನೀಡಿ" ಎಂದು ವಿನಯದಿಂದ ಕೇಳಿಕೊಂಡ. "ಆ ವಿಚಾರ ನಿನಗೆ ಹೇಗೆ ತಿಳಿಯಿತು?" ಎಂದು ಉರಿಲಿಂಗದೇವನು ಕೇಳಿದಾಗ ಪೆದ್ದಣ್ಣನು ತಾನು ಮಾಳಿಗೆಯ ಮೇಲಿನಿಂದ ಅದನ್ನು ಕಂಡ ವಿಷಯವನ್ನು ವಿವರಿಸಿದ. ಗುರು ಆಗ ಸುಮ್ಮನಾದ. ಮತ್ತೂ ಕೆಲವು ದಿವಸಗಳಾದವು; ಪೆದ್ದಣ್ಣ ಹುಲ್ಲು-ಕಟ್ಟಿಗೆಯನ್ನು ತರುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇನ್ನೊಂದು ದಿನವೂ ತನಗೆ ಲಿಂಗವನ್ನು ಕೊಡಿ ಎಂದು ಕೇಳಿಕೊಂಡ; `ಇವನು ತಾನು ಹೋದಲ್ಲಿ ಹಿಂಬಾಲಿಸುತ್ತಾನೆ, ಇವನ ಕಾಟ ಕಳೆದುಕೊಳ್ಳಬೇಕೆಂ'ದು ಬಗೆದು ಉರಿಲಿಂಗದೇವನು ಒಂದು ಕಲ್ಲನ್ನು ಕೈಯಲ್ಲಿ ತೆಗೆದುಕೊಂಡು "ಗೆ ದಗಡಿ, ಜಾ" (ತಗೋ ಕಲ್ಲು, ತೊಲಗು) ಎಂದು ಹೇಳಿ ಒಂದು ಕಲ್ಲು ಕೊಟ್ಟ. ಅದನ್ನು ಸ್ವೀಕರಿಸಿದ ಮುಗ್ಧ ಪೆದ್ದಣ್ಣ ಗುರು ಹೇಳಿದ್ದನ್ನೇ ಮಂತ್ರವೆಂದು ತಿಳಿದು "ಗೆ ದಗಡಿ, ಜಾ" "ಜಾ, ದಗಡಿ ಗೆ" ಎಂದು ಹೇಳಿಕೊಳ್ಳುತ್ತ ನಡೆದ. ಪೆದ್ದಣ್ಣನ ಭಾವದ ಬಲುಮೆಯಿಂದ ಕಲ್ಲು ಜ್ಯೋತಿರ್ಮಯಲಿಂಗವಾಯಿತು. ಅವನು ಗುರುಸೇವೆಯನ್ನು ಮುಂದುವರಿಸಿದ.
ಬೆಳಗಾಯಿತು. ಪೆದ್ದಣ್ಣ ಉರಿಲಿಂಗದೇವನ ಮನೆಗೆ ಬಂದ. ಅವನು ಹೇಳದಿದ್ದರೂ ತಾನಾಗಿಯೇ ಅವನಿಗೆಂದು ಒಂದು ಹೊರೆ ಹುಲ್ಲು, ಒಂದು ಹೊರೆ ಕಟ್ಟಿಗೆಯನ್ನು ತಂದು ಹಾಕಿದ. ಅಂದು ಮಾತ್ರವಲ್ಲ, ಇದನ್ನು ಪ್ರತಿನಿತ್ಯ ಮಾಡುತ್ತ ಬಂದ. ಹೀಗೇ ಕೆಲವು ದಿನಗಳು ಕಳೆದವು. ಒಂದು ದಿನ ಉರಿಲಿಂಗದೇವನು, "ನಿನಗೇನು ಬೇಕು? ಇದುವರೆಗೆ ಹುಲ್ಲು ಕಟ್ಟಿಗೆ ಹೊರೆಗಳನ್ನು ತಂದು ಹಾಕಿದುದರ ಬಾಬ್ತು ಹಣವನ್ನು ತೆಗೆದುಕೋ, ಮತ್ತೆ ಈ ಕಡೆ ಬರಬೇಡ, ಅಂಗಳದಲ್ಲಿಯೇ ನಿಂತುಕೊ" ಎಂದು ಗದರಿಸಿದ. ತನಗೆ ಲಿಂಗದೀಕ್ಷೆ ಕೊಡಲು ಸಾಧ್ಯವಿಲ್ಲದ್ದರಿಂದ ಬರಬೇಡವೆಂದು ಹೇಳುತ್ತಿದ್ದಾನೆ ಎಂಬುದಾಗಿ ಪೆದ್ದಣ್ಣ ಅರ್ಥಮಾಡಿಕೊಂಡ. ಆದರೆ ಹುಲ್ಲು-ಕಟ್ಟಿಗೆ ಹೊರೆಗಳನ್ನು ತಂದುಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ. ಹೀಗೆಯೇ ಮತ್ತೆ ಕೆಲವು ದಿನಗಳು ಸಂದವು. ಮುಂದೆ ಒಂದು ದಿನ ಕಟ್ಟಿಗೆಯನ್ನು ತಂದಾಗ ಉರಿಲಿಂಗದೇವನು ಮತ್ತೆ, "ನಿನಗೆ ಏನು ಬೇಕು?" ಎಂದು ಕೇಳಿದ. ಆಗ ಪೆದ್ದಣ್ಣನು, "ಸ್ವಾಮಿ, ನಂದಿವಾಡದ ಸೂರಭಕ್ತನಿಗೆ ದೀಕ್ಷೆಯನ್ನು ನೀಡಿದಂತೆ ನನಗೂ ನೀಡಿ" ಎಂದು ವಿನಯದಿಂದ ಕೇಳಿಕೊಂಡ. "ಆ ವಿಚಾರ ನಿನಗೆ ಹೇಗೆ ತಿಳಿಯಿತು?" ಎಂದು ಉರಿಲಿಂಗದೇವನು ಕೇಳಿದಾಗ ಪೆದ್ದಣ್ಣನು ತಾನು ಮಾಳಿಗೆಯ ಮೇಲಿನಿಂದ ಅದನ್ನು ಕಂಡ ವಿಷಯವನ್ನು ವಿವರಿಸಿದ. ಗುರು ಆಗ ಸುಮ್ಮನಾದ. ಮತ್ತೂ ಕೆಲವು ದಿವಸಗಳಾದವು; ಪೆದ್ದಣ್ಣ ಹುಲ್ಲು-ಕಟ್ಟಿಗೆಯನ್ನು ತರುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇನ್ನೊಂದು ದಿನವೂ ತನಗೆ ಲಿಂಗವನ್ನು ಕೊಡಿ ಎಂದು ಕೇಳಿಕೊಂಡ; `ಇವನು ತಾನು ಹೋದಲ್ಲಿ ಹಿಂಬಾಲಿಸುತ್ತಾನೆ, ಇವನ ಕಾಟ ಕಳೆದುಕೊಳ್ಳಬೇಕೆಂ'ದು ಬಗೆದು ಉರಿಲಿಂಗದೇವನು ಒಂದು ಕಲ್ಲನ್ನು ಕೈಯಲ್ಲಿ ತೆಗೆದುಕೊಂಡು "ಗೆ ದಗಡಿ, ಜಾ" (ತಗೋ ಕಲ್ಲು, ತೊಲಗು) ಎಂದು ಹೇಳಿ ಒಂದು ಕಲ್ಲು ಕೊಟ್ಟ. ಅದನ್ನು ಸ್ವೀಕರಿಸಿದ ಮುಗ್ಧ ಪೆದ್ದಣ್ಣ ಗುರು ಹೇಳಿದ್ದನ್ನೇ ಮಂತ್ರವೆಂದು ತಿಳಿದು "ಗೆ ದಗಡಿ, ಜಾ" "ಜಾ, ದಗಡಿ ಗೆ" ಎಂದು ಹೇಳಿಕೊಳ್ಳುತ್ತ ನಡೆದ. ಪೆದ್ದಣ್ಣನ ಭಾವದ ಬಲುಮೆಯಿಂದ ಕಲ್ಲು ಜ್ಯೋತಿರ್ಮಯಲಿಂಗವಾಯಿತು. ಅವನು ಗುರುಸೇವೆಯನ್ನು ಮುಂದುವರಿಸಿದ.
ಇತ್ತ, ನಂದರಾಜನೆಂಬುವನು ಒಂದು ಕೆರೆಯನ್ನು ಕಟ್ಟಿಸುತ್ತಿದ್ದ;
ಆದರೆ ಭೂಮಿಯನ್ನೆಷ್ಟೇ ಅಗೆದರೂ ನೀರು ಬೀಳಲಿಲ್ಲ.
ಆಗ ಅವನು ತಾನು
ಬಲ್ಲ ಶಿಲ್ಪಿಯೊಬ್ಬನನ್ನು ಕರೆದು ಸಲಹೆ ಕೇಳಿದ.
ಅವನು "ಮಧ್ಯದಲ್ಲಿರುವ ಬಂಡೆಯನ್ನು ಕಿತ್ತರೆ ನೀರು
ಬಿದ್ದೀತು" ಎಂದ. ಉರಿಲಿಂಗದೇವನು ನೋಡಿದಲ್ಲದೆ
ಈ ಕಲ್ಲನ್ನು ಕೀಳಲು
ಆಗದೆಂದು ಭಾವಿಸಿದ ನಂದರಾಜನು ಗುರು-ಶಿಷ್ಯರಿಬ್ಬರನ್ನೂ ಕರೆದುಕೊಂಡು ಹೋಗಿ ಅದನ್ನು ತೋರಿಸಿದ.
ಆಗ ಪೆದ್ದಣ್ಣನು ತನ್ನ
ಲಿಂಗವನ್ನು ಕುರಿತು, "ಗೆ, ದಗಡಿ, ಜಾ"
ಎಂದು ಹೇಳಿದ. ಆಗ ಲಿಂಗವು
ಹೋಗಿ ಆ ಬಂಡೆಯ
ಮೇಲೆ ಕುಳಿತುಕೊಂಡಿತು. ಮತ್ತೆ "ಗೆ, ದಗಡಿ, ಜಾ"
ಎಂದು ಪೆದ್ದಣ್ಣನು ಹೇಳಲು ಅದು ಬಂಡೆಯನ್ನು
ಕಿತ್ತು ಹಾಕಿತು; ನೀರಿನ ಸೆಲೆ
ಕಾಣಿಸಿಕೊಂಡಿತು. ನಂದರಾಜನು ಗೌರವದಿಂದ ನಮಸ್ಕರಿಸಿ
ಅವರಿಬ್ಬರನ್ನೂ ಕಳಿಸಿಕೊಟ್ಟ.
ಈ ಘಟನೆಯಿಂದಾಗಿ ಉರಿಲಿಂಗದೇವನಿಗೆ ಪೆದ್ದಣ್ಣನ ಮಹಿಮೆ ಗೊತ್ತಾಯಿತು.
ಈತನು ದೊಡ್ಡ ಗುರುಭಕ್ತನೆಂಬುದನ್ನು ಮನಗಂಡ,
ಹಾಗೂ ತಾತ್ಸಾರದಿಂದ ತಾನಿತ್ತಿದ್ದ ಕಲ್ಲೇ ಅವನ ಕೈಯಲ್ಲಿ
ಜ್ಯೋರ್ತಿಮಯಲಿಂಗವಾದುದನ್ನು ಕಂಡು ಅಚ್ಚರಿಗೊಂಡ. ಅವನಿಗೆ
ಉರಿಲಿಂಗಪೆದ್ದಣ್ಣ ಎಂಬ ಹೊಸ ಹೆಸರನ್ನಿತ್ತು
ಅವನಿಗೆ ಯಥಾವಿಧಿಯಾಗಿ ಉಪದೇಶಮಾಡಿದ. "ಯಥಾ ಭಾವಸ್ತಥಾ ಸಿದ್ಧಿಃ"
ಎಂಬ ಆಗಮದ ಮಾತಿನಂತೆಯೇ
"ಭಕ್ತರ ಭಾವದಲ್ಲಿ ಶಿವ ನೆಲೆಗೊಂಬುದು
ಸತ್ಯ" ಎಂದು ತಿಳಿದು ಉರಿಲಿಂಗದೇವನು
ತನ್ನ ಆಚಾರ್ಯಪೀಠವನ್ನು ಪೆದ್ದಣ್ಣನಿಗೆ ಇತ್ತು "ಗುರುಸಂಪ್ರದಾಯವ ನಡೆಸು" ಎಂದು ಸೂಚಿಸಿದ. ಅದರಂತೆ
ಪೆದ್ದಣಯ್ಯನು ಶಿವಭಕ್ತಿಯನ್ನು ಆಚರಿಸುತ್ತ ಕೆಲವು ಕಾಲವಿದ್ದು,
ಕೊನೆಗೆ ತನ್ನ ಮತ್ರ್ಯದ ಮಣಿಹ
ತೀರಲು, 'ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ'ನೆಂಬ ತನ್ನ ಇಷ್ಟಲಿಂಗದಲ್ಲಿ
ಬೆರೆದು ನಿರ್ವಯಲಾದ.
ಈಗ ಉರಿಲಿಂಗಪೆದ್ದಿಯ 366 ವಚನಗಳು ದೊರೆತಿವೆ; ಅವುಗಳು
'ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ' ಎಂಬ ಮುದ್ರಿಕೆಯಿಂದ ಕೂಡಿದವು.
ಅವನ ವಚನಗಳಲ್ಲಿ ಕಾಣುವ
ಸಾಮಾಜಿಕ ಪ್ರಜ್ಞೆ ತುಂಬ ಆಶ್ಚರ್ಯಕರವಾದುದು.
ಅವನ ಹಲವಾರು ವಚನಗಳಲ್ಲಿನ
ಧಾಟಿಯು ಮೃದುತ್ವ ಮತ್ತು ವಿನೀತತೆಗಳಿಂದ
ದೂರವಾಗಿ ಕೆಚ್ಚೆದೆಯನ್ನು ಪ್ರದರ್ಶಿಸುವಂಥವು, ಅದರ ಹಿಂದಿನ ಆತ್ಮವಿಶ್ವಾಸ
ಅಚ್ಚರಿಯನ್ನುಂಟುಮಾಡುವಂಥದು. ಅವನು ಹೇಳುವ ಅನೇಕ
ಸಂಗತಿಗಳು ಬೇರೆಲ್ಲೂ ಕಾಣದೆ, ಇವುಗಳೆಲ್ಲ
ಅವನಿಗೆ ತಿಳಿದುಬಂದುದು ಹೇಗೆ ಎಂದು ನಮ್ಮಲ್ಲಿ
ವಿಸ್ಮಯವನ್ನುಂಟುಮಾಡುತ್ತದೆ. ಬೇರೆಯ
ಅನೇಕ ಕೆಳವರ್ಗದ ವಚನಕಾರರ ರಚನೆಗಳಲ್ಲಿ
ಕಾಣಿಸದ ಗಟ್ಟಿದನಿ ಇವನ ವಚನಗಳ
ವೈಶಿಷ್ಟ್ಯವಾಗಿದೆ.
ಉರಿಲಿಂಗಪೆದ್ದಿಯ
ಗುರುವಾದ ಉರಿಲಿಂಗದೇವನೂ ವಚನಕಾರನೆಂಬುದು ಸರ್ವವೇದ್ಯ ಸಂಗತಿ. ಆದರೆ,
ಈಗಾಗಲೇ ಗಮನಿಸಿರುವಂತೆ, ಅವನ ವಚನಗಳು ಪ್ರಸಿದ್ಧವಾಗಿರುವುದು
ಶರಣಸತಿ-ಲಿಂಗಪತಿ ಭಾವನೆಯ ಅಭಿವ್ಯಕ್ತಿಗಾಗಿ.
ಗಜೇಶ ಮಸಣಯ್ಯನನ್ನು ಬಿಟ್ಟರೆ ಇವನೇ ಅತಿ
ಹೆಚ್ಚು ಸಂಖ್ಯೆಯ ಸತಿಪತಿಭಾವದ ವಚನಗಳನ್ನು
ಬರೆದ ವಚನಕಾರ. ಈ ಭಾವನೆಯಲ್ಲಿ
ಶರಣಾಗತಿಯೇ ಪ್ರಾಧಾನ್ಯ. ಆದರೆ ಶಿಷ್ಯನಲ್ಲಿ ಆ
ಭಾವನೆಯನ್ನವನು ತುರಕುಲು ಸಾಧ್ಯವಾಗಲಿಲ್ಲ, ಅದಕ್ಕೆ
ಕಾರಣ ಪೆದ್ದಿಯ ಸಾಮಾಜಿಕ ಎಚ್ಚರ.
ಅವನಲ್ಲಿ ಎದ್ದು ಕಾಣುವ ಗುಣ
ಸಿಟ್ಟು, ಅಸಹನೆ; ಮಠಾಧಿಪತಿಯಾಗಿದ್ದರೂ ಅದನ್ನುಳಿಸಿಕೊಂಡ.
ಇವನಲ್ಲಿ ಸತಿಪತಿಭಾವದ ವಚನಗಳೂ ಇಲ್ಲ; ಕೆಲವೆಡೆ
ಸಾಂಪ್ರದಾಯಿಕತೆಯಿದ್ದರೂ ಬಹುತೇಕ ಸಂದರ್ಭಗಳಲ್ಲಿ ಆಕ್ರೋಶವೇ
ಹೆಚ್ಚಾಗಿದೆ. ಉರಿಲಿಂಗದೇವ ಈ ಶಿಷ್ಯನಲ್ಲಿ
ತನ್ನ ಮಿದುಗುಣವನ್ನು ತುಂಬಲು ಸಾಧ್ಯವಾಗದಿರಲು ಕಾರಣ
ಶಿಷ್ಯನ ತನ್ನತನವನ್ನು ಅಳಿಸಿಹಾಕಲು ಪ್ರಯತ್ನಿಸದೆ ಅದನ್ನುಳಿಸಿಕೊಳ್ಳಲು ಅವಕಾಶವಿತ್ತ ಗುರುವಿನ ಉದಾತ್ತತೆಯೋ
ಅಥವಾ ಶಿಷ್ಯನ ಜಿಗುಟುಗುಣವೋ ತಿಳಿಯದು;
ಅಂತೂ ಮನೋಭಾವದಲ್ಲಿ ಇಬ್ಬರೂ ತೀರ ಭಿನ್ನ.
ಇವರದು ಅಪೂರ್ವ ಗುರು-ಶಿಷ್ಯ
ಜೋಡಿಯೇ ಸರಿ.
--
--
ಎನ್ನಂಗಳದಲ್ಲಿ
ನಿನಗೆ ಮಜ್ಜನ
ಎನ್ನ ಲಲಾಟದಲ್ಲಿ ನಿನಗೆ ಗಂಧಾಕ್ಷತೆ
ಎನ್ನ ತುರುಬಿನಲ್ಲಿ ನಿನಗೆ ಕುಸುಮಪೂಜೆ
ಎನ್ನ ನೇತ್ರದಲ್ಲಿ ನಿನಿಗೆ ನಾನಾ ರೂಪು
ವಿಚಿತ್ರವಿನೋದ
ಎನ್ನ ಶ್ರೋತ್ರದಲ್ಲಿ ನಿನಗೆ ಪಂಚಮಹಾವಾದ್ಯ ಕೇಳಿಕೆ
ಎನ್ನ ನಾಸಿಕದಲ್ಲಿ ನಿನಗೆ ಸುಗಂಧ, ಧೂಪಪರಿಮಳ
ಎನ್ನ ಜಹ್ವೆಯಲ್ಲಿ ನಿನಗೆ ಷಡ್ರಸಾನ್ನ ನೈವೇದ್ಯ
ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತ್ರಾಭರಣಾಲಂಕಾರ ಪೂಜೆ
ಎನ್ನ ಸಚ್ಚಿದಾನಂದ ಸೆಜ್ಜೆಗೃಹದಲ್ಲಿ ನೀನು
ಸ್ಪರ್ಶನಂಗೈದು
ನೆರೆದಿಪ್ಪೆಯಾಗಿ ನೀ ನಾನೆಂಬೆರಡಳಿದು
ತಾನು ತಾನಾದ ನವನೇನೆಂಬೆನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
--
ಲಿಂಗದೊಡನೆ
ಸಹಭೋಜನ ಮಾಡುವ
ಸದ್ಭಕ್ತನ
ಆಚರಣೆ ಕ್ರಿಯೆಗಳೆಂತುಟಯ್ಯಾ ಎಂದಡೆ:
ಲಿಂಗ ಜಂಗಮದ ಕುಂದು ನಿಂದೆಯಂ
ಕೇಳಲಾಗದು,
ಕೇಳಿದಡೆ ಆ ನಿಂದಕನ
ಕೊಲುವುದು,
ಕೊಲಲಾಗದಿರ್ದಡೆ
ತನ್ನ ತಾನಿರಿದುಕೊಂಡು ಸಾವುದು,
ಸಾಯಲಾರದಿರ್ದಡೆ
ಅವನ ಬಯ್ವುದು,
ತನ್ನ ಅರ್ಥಪ್ರಾಣಾಭಿಮಾನವು ಶಿವಾರ್ಪಣವಾಯಿತ್ತೆಂದು
ಮನದಲ್ಲಿ ಸಂತೋಷವ ತಾಳಿದಡೆ ಪ್ರಸಾದವುಂಟು.
ಇಂತಲ್ಲದೆ
ಮನದಲ್ಲಿ ನೋವ ತಾಳಿದಡೆ ಆಚಾರಭ್ರಷ್ಟನು.
--
ಶ್ರೀಗುರು
ಶಿಷ್ಯಂಗೆ ಮಂತ್ರವ ಮೂರ್ತಿಗೊಳಿಸಬೇಕಾಗಿ,
ಪೃಥ್ವಿಯ ಮೇಲಣ ಕಣಿಯ ತಂದು,
ಇಷ್ಟಲಿಂಗವ ಮಾಡಿ,
ಶಿಷ್ಯನ ತನುವಿನ ಮೇಲೆ ಧರಿಸಿದ
ಲಿಂಗವು
ಅವತಳವಾಗಿ
ಭೂಮಿಯಲ್ಲಿ ಸಿಂಹಾಸನಗೊಂಡಿತ್ತೆಂದು
ಸಮಾಧಿಯ ಹೊಗುವರಯ್ಯಾ.
ಲಿಂಗಕ್ಕೆ
ಅವತಳವಾದಡೆ ಭೂಮಿ ತಾಳಬಲ್ಲುದೆ?
ಮಾರಾಂತನ ಗೆಲಿವೆನೆಂದು ಗರಡಿಯ ಹೊಕ್ಕು
ಕಠಾರಿಯ ಕೋಲು ನೆಲಕ್ಕೆ ಬಿದ್ದಡೆ,
ಆ ಕೋಲ ಬಿಟ್ಟು
ಸಾಧನೆಯಂ ಬಿಟ್ಟು ಕಳೆವರೇ ಅಯ್ಯಾ?
ತಟ್ಟಿ ಮುಟ್ಟಿ ಹಳಚುವಲ್ಲಿ
ಅಲಗು ಬಿದ್ದಡೆ ಭಂಗವಲ್ಲದೆ ಕೋಲು
ಬಿದ್ದಡೆ ಭಂಗವೇ ಅಯ್ಯಾ?
ಆ ಕೋಲ ತಳೆದುಕೊಂಡು ಸಾಧನೆಯ
ಮಾಡುವದೇ ಕರ್ತವ್ಯ.
ಆ ಲಿಂಗ ಹುಸಿ ಎಂದಡೇನಯ್ಯಾ?
ಶ್ರೀವಿಭೂತಿವೀಳೆಯಕ್ಕೆ
ಸಾಕ್ಷಿಯಾಗಿ ಬಂದ ಶಿವಗಣಂಗಳು ಹುಸಿಯೇ?
ಆ ಗಣಂಗಳು ಹುಸಿಯಾದರೆ, ಕರ್ಣಮಂತ್ರ
ಹುಸಿಯೇ?
ಆ ಕರ್ಣಮಂತ್ರ ಹುಸಿಯಾದಡೆ,
ಆ ಶ್ರೀಗುರುಲಿಂಗವು ಹುಸಿಯೇ?
ಆ ಶ್ರೀಗುರುಲಿಂಗ ಹುಸಿಯಾದಡೆ,
ಪಾದತೀರ್ಥ
ಪ್ರಸಾದ ಹುಸಿಯೇ?
ಇಂತೀ ಷಟ್ಸ್ಥಲವ ತುಚ್ಛವ ಮಾಡಿ,
ಗುರೂಪದೇಶವ
ಹೀನವ ಮಾಡಿ, ಸಮಾಧಿಯ ಹೊಗುವ
ಪಂಚಮಹಾಪಾತಕರ
ಮುಖವ ನೋಡಲಾಗದು,
ಉರಿಲಿಂಗೆಪೆದ್ದಿಪ್ರಿಯ
ವಿಶ್ವೇಶ್ವರ.
--
ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೆ
ತ್ರಿಜಗದಲ್ಲಿ?
ವೇದವೆಂಬುದೊಂದು
ಸಾಧಕ ಸಂಪತ್ತು.
ವೇದಂಗಳು ಶ್ವೇತ, ಕೃಷ್ಣ, ಅಗಸ್ತ್ಯ,
ವಿಶ್ವಾಮಿತ್ರಮುನಿಗಳಿಂದಾದವು.
ಶಬ್ದಗಾಂಭೀರ್ಯ
ಶ್ರುತಿಕೋಟಿ ಚರಣಕಮಲವೆಂಬ
ಲಿಂಗದ ಕೈಯಲ್ಲಿ ಕಲಿತ ವೇದಂಗಳು
ಅಜ್ಞಾನಸಂಗವಾಗಿ
ಅಗೋಚರವಾಗಿ ನುಡಿದವು.
ಋಗ್ವೇದ –
'ನಾಹಂಕಾರೋ ಬ್ರಹ್ಮತೇಜಃ' ಎಂದುದಾಗಿ,
ಯಜುರ್ವೇದ
– 'ನಾಹಂಕಾರೋ ಲಕ್ಷ್ಮೀಪತಿರ್ವಿಷ್ಣುತೇಜಃ' ಎಂದುದಾಗಿ,
ಸಾಮವೇದ –
'ನಾಹಂ ದೇವೋ ರುದ್ರತೇಜಃ' ಎಂದುದಾಗಿ,
ಅಥರ್ವಣವೇದ
– 'ನಾಹಂ ಸ್ಥಲಂ' ಎಂದುದಾಗಿ,
ಕುಲಮದದಿಂದ
ಬ್ರಹ್ಮ ಕೆಟ್ಟ, ಬಲಮದದಿಂದ ವಿಷ್ಣು
ಕೆಟ್ಟ,
ದೈವಮದದಿಂದ
ರುದ್ರ ಕೆಟ್ಟ, ಛಲಮದದಿಂದ ಇಂದ್ರ
ಕೆಟ್ಟ.
ಇಂತೀ ನಾಲ್ಕು ಶ್ರುತಿಗಳು ತಮ್ಮ
ಗರ್ವದಿಂದ
ನೂಂಕಿಸಿಕೊಂಡವು
ಶಿವನ ಅರಮನೆಯ ಬಾಗಿಲಲ್ಲಿ.
ಮತ್ತಾ ಚತುರ್ವೇದಂಗಳು ಬಂದು
ಲಿಂಗದ ಚತುರ್ದಿಶೆಯಲ್ಲಿ ಓಲೈಸಿ,
ಕೈಮುಗಿದುಕೊಂಡು
ಹೊಗಳುತ್ತಿದ್ದವು.
ಅದೆಂತೆಂದಡೆ
ಶ್ರುತಿ:
'ಓಂ ಜಯತತ್ತ್ವಾನಾಂ ಪುರುಷಮೇರು ಕಾಮ್ಯಾನಾಂ
ಪುಣ್ಯಜಪಧ್ಯಾನಾನಾಂ
ಸರ್ವಜನವಿನಾಶಿನಾಂ
ಆದಿ ಅನಾದಿ ಪಿತ್ರೂಣಾಂ ಅಜಕೋಟಿಸಹಸ್ರವಂದ್ಯಾನಾಂ
ದೇವಕೋಟಿಚರಣಕಮಲಾನಾಂ'
ಎಂದು
ವೇದಂಗಳು ದೇವರ ಚರಣದ ಕುರುಹ
ಕಾಣವು.
ಆದಿಯಲ್ಲಿ
ನಮ್ಮ ಪುರಾತನರು ವೇದವನೋದಿದರೆ? ಇಲ್ಲ.
ಕಲ್ಲಲಿಟ್ಟರು.
ಕಾಲಲೊದೆದರು,
ಬಿಲ್ವಪತ್ರದ
ಮರದ ಕೆಳಗೆ ಲಿಂಗವಂ
ಪುಟ್ಟಿಸಿ ನಿಷ್ಠೆಯ ಪಡೆದರು,
ಮನೆಯ ಬಾಗಿಲ ಕಾಯಿಸಿಕೊಂಡರು,
ಆಡಿಸಿದರು,
ಅಡಗಿಸಿದರು,
ಓಡಿದ ಲಿಂಗವಂ ತಂದು ಪ್ರತಿಷ್ಠೆಯಂ
ಮಾಡಿದರು.
ಇಂತಪ್ಪ ದೃಷ್ಟವ ಸಾಧಿಸಿದರು ನಮ್ಮ
ಪುರಾತನರು.
ನಿಮ್ಮವರು
ಓದವನೋದಿದನೆಂಬುದನರಿದು.
ಅವರನೊಲ್ಲದೆ
ಬಿಟ್ಟ ಕಾಣಾ
ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರ.
--
ಪುಣ್ಯಸ್ತ್ರೀ ಕಾಳವ್ವೆ : - ಸು. 1180. ಬಸವಾದಿ ಪ್ರಮಥರ
ಕಾಲದಲ್ಲಿ ಜೀವಿಸಿದ್ದ ಪ್ರಸಿದ್ಧ ವಚನಕಾರ್ತಿ,
ಶಿವಾನುಭವಿ, ಶರಣಮಾರ್ಗಾನುಯಾಯಿ. ಉರಿಲಿಂಗ ಪೆದ್ದಿಯ ಹೆಂಡತಿ. ಉರಿಲಿಂಗ
ಪೆದ್ದೆಗಳರಸ ಎಂಬ ಅಂಕಿತದಲ್ಲಿ ವಚನಗಳನ್ನು
ರಚಿಸಿದ್ದಾಳೆ. ಆಂಧ್ರ ಪ್ರದೇಶದಿಂದ ಬಂದು
ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಕಂಧಾರ
ಗ್ರಾಮದಲ್ಲಿ ವಾಸಿಸುತ್ತಿದ್ದಳು. ಈಕೆಯ ಪತಿ ಪೆದ್ದಯ್ಯ
ಕುಪ್ರಸಿದ್ಧ ಕಳ್ಳ. ಉರಿಲಿಂಗದೇವನ ಪ್ರಭಾವದಿಂದ ಶರಣನಾಗಿ
ಉರಿಲಿಂಗ ಪೆದ್ದಿಯಾದ. ಪತಿಯನ್ನನುಸರಿಸಿ ಈಕೆಯೂ ಶರಣೆಯಾದಳು. ಈಕೆ
ಹನ್ನೆರಡನೆಯ ಶತಮಾನದ ಸುಪ್ರಸಿದ್ಧ ವಚನಾಕಾರ್ತಿಯರಿಗೆ
ಸರಿಮಿಗಿಲೆನಿಸುವಂತೆ ವಚನಗಳನ್ನು ರಚಿಸಿರುವುದಲ್ಲದೆ ತನ್ನ
ಪತಿಯ ಜೊತೆಯಲ್ಲಿ ಶಿವಾನುಭವ ಪ್ರಚಾರ
ಕಾರ್ಯದಲ್ಲಿ ನಿರಂತರ ನೆರವಾದವಳು. ಅಸ್ಪ್ರಶ್ಯರೆನಿಸಿದ್ದ ಈ ಸತಿ
ಪತಿಯರು ಶಿವಾನುಭವವನ್ನು ಪಡೆದ ಮೇಲೆ ಶ್ರೇಷ್ಠ
ಜ್ಞಾನಿಗಳೆನಿಸಿಕೊಂಡರು. ಈಕೆ ರಚಿಸಿರಬಹುದಾದ ಎಲ್ಲ
ವಚನಗಳೂ ಸಿಕ್ಕಿಲ್ಲ. ಸಿಕ್ಕಿರುವ ಕೆಲವೇ ವಚನಗಳಲ್ಲಿ
ಕಾಣುವ ಪಾಂಡಿತ್ಯ, ಅನುಭವ, ನಿಷ್ಠೆ,
ತತ್ತ್ವಜ್ಞಾನದ ತಿಳಿವಳಿಕೆಗಳೂ ಗೃಹಿಣಿಯಲ್ಲಿರಬೇಕಾದ ಸದ್ಗುಣಗಳ ವಿವರಗಳೂ ಈಕೆಯನ್ನು
ಶ್ರೇಷ್ಠ ವಚನಕಾರ್ತಿಯಾಗಿಸಿವೆ. ಹನ್ನೆರೆಡನೆಯ ಶತಮಾನದಲ್ಲಿ ಕಾಣುವ ಅಪೂರ್ವ ಸತಿಪತಿ
ಜೋಡಿಗಳಲ್ಲಿ ಇವರದೂ ಒಂದು.
ವಚನಗಳ ವೈಶಿಷ್ಟ್ಯ:
ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿ ಭೂಸುರರು ಕ್ರಮವಾಗಿ ಆನೆ, ಮಹಿಷ, ಅಶ್ವ ಮೊದಲಾದ ಪ್ರಾಣಿಗಳನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಲಿಯುಗದಲ್ಲಿ ಹೋತನನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಾಳವ್ವೆ ತನ್ನ ವಚನವೊಂದರಲ್ಲಿ ತಿಳಿಸುತ್ತಾ, ಮನುಷ್ಯ ಸೇವಿಸುವ ಆಹಾರದ ಮೇಲೆ ಜಾತಿಗಳನ್ನು ವಿಂಗಡಿಸುವುದನ್ನು ಖಂಡಿಸಿದ್ದಾಳೆ. ದೈವಗಳನ್ನು ಒಲಿಸಿಕೊಳ್ಳುವ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವಂತಹ ಘೋರ ಕೃತ್ಯವನ್ನು, ಜಾತೀಯತೆಯನ್ನು ತನ್ನ ವಚನಗಳ ಮೂಲಕ ಉಗ್ರವಾಗಿ ಖಂಡಿಸಿ, ವ್ರತಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಳೆ. ಈಕೆಯ ೧೨ ವಚನಗಳು ಲಭ್ಯವಾಗಿವೆ.
ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿ ಭೂಸುರರು ಕ್ರಮವಾಗಿ ಆನೆ, ಮಹಿಷ, ಅಶ್ವ ಮೊದಲಾದ ಪ್ರಾಣಿಗಳನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಲಿಯುಗದಲ್ಲಿ ಹೋತನನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಾಳವ್ವೆ ತನ್ನ ವಚನವೊಂದರಲ್ಲಿ ತಿಳಿಸುತ್ತಾ, ಮನುಷ್ಯ ಸೇವಿಸುವ ಆಹಾರದ ಮೇಲೆ ಜಾತಿಗಳನ್ನು ವಿಂಗಡಿಸುವುದನ್ನು ಖಂಡಿಸಿದ್ದಾಳೆ. ದೈವಗಳನ್ನು ಒಲಿಸಿಕೊಳ್ಳುವ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವಂತಹ ಘೋರ ಕೃತ್ಯವನ್ನು, ಜಾತೀಯತೆಯನ್ನು ತನ್ನ ವಚನಗಳ ಮೂಲಕ ಉಗ್ರವಾಗಿ ಖಂಡಿಸಿ, ವ್ರತಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಳೆ. ಈಕೆಯ ೧೨ ವಚನಗಳು ಲಭ್ಯವಾಗಿವೆ.
ಕುರಿ-ಕೋಳಿ ಕಿರಿಮೀನು
ತಿಂಬವರೆಲ್ಲ
ಕುಲಜ ಕುಲಜರೆಂದೆಂಬರು!
ಶಿವಗೆ ಪಂಚಾಮೃತವ ಕರೆವ
ಪಶುವ
ತಿಂಬ ಮಾದಿಗ ಕೀಳುಜಾತಿಯೆಂಬರು
ಅವರೆಂತು ಕೀಳುಜಾತಿಯಾದರು ?
ಜಾತಿಗಳೇ ನೀವೇಕೆ ಕೀಳಾದಿರೊ
?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿ ನೆಕ್ಕಿ ಹೋಯಿತು
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಂಗೆ
ಶೋಭಿತವಾಯ್ತು ಅದೆಂತೆಂದಡೆ-
ಸಿದ್ಧಲಿಕೆಯಾಯ್ತು, ಸಗ್ಗಳೆಯಾಯ್ತು
ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು
ಶುದ್ಧವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ
ನಾಯಕ ನರಕ ತಪ್ಪದಯ್ಯ!
ಉರಿಲಿಂಗಪೆದ್ದಿಗಳರಸ ಇದನೊಲ್ಲನವ್ವಾ
--
ಕಾಳವ್ವೆಯ ಇತರ ವಚನಗಳು:
ಅರ್ಥಪ್ರಾಣಾಬಿಮಾನದ ಮೇಲೆ ಬಂದಡೂ ಬರಲಿ,
ವ್ರತಹೀನನ ನೆರೆಯಲಾಗದುದ
ನೋಡಲು ನುಡಿಸಲು ಎಂತೂ
ಆಗದು.
ಹರಹರಾ, ಪಾಪವಶದಿಂದ ನೋಡಿದಡೆ,
ರುದ್ರಜಪ ಮಾಹೇಶ್ವರಾರಾಧನೆಯ ಮಾಳ್ಪುದು.
ಇಂತಲ್ಲದವರ ಉರಿಲಿಂಗಪೆದ್ದಿಗಳರಸ ನಕ್ಕು ಕಳೆವನವ್ವಾ.
--
ಅಯ್ಯಾ, ಸೂಳೆಗೆ ಹುಟ್ಟಿದ
ಮಕ್ಕಳಿಗೆ,
ಕೊಟ್ಟವರೊಳು ಸಮ್ಮೇಳ, ಕೊಡದವರೊಳು ಕ್ರೋಧ.
ವ್ರತಹೀನರೊಳು ಮೇಳ, ವ್ರತನಾಯಕರೊಳು ಅಮೇಳ.
ಸುಡು ಸುಡು ! ಅವರ
ಕೂಡಿದಡೆ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ
--
ಉಂಡೊಡೆಯರಲ್ಲಿ ಕೊಂಬ ಪ್ರಸಾದ ಕಾರಿದಕೂಳು.
ಸಣ್ಣವರಲ್ಲಿ ಕೊಂಬ ಪ್ರಸಾದ ಸಂತೆಯ
ಸೂಳೆಯ ಎಂಜಲು.
ಅಳಿಯನಲ್ಲಿ ಕೊಂಬ ಪ್ರಸಾದ
ಅಮೇಧ್ಯ.
ಮಕ್ಕಳಲ್ಲಿ ಕೊಂಬ ಪ್ರಸಾದ
ಗೋಮಾಂಸ.
ತಮ್ಮನಲ್ಲಿ ಕೊಂಬ ಪ್ರಸಾದ
ಸಿಂಗಿ.
ನಂಟರಲ್ಲಿ ಕೊಂಬ ಪ್ರಸಾದ
ನರಮಾಂಸ.
ವಂದಿಸಿ ನಿಂದಿಸಿ ಕೊಂಬ
ಪ್ರಸಾದವ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
--
ಕುರಿ ಕೋಳಿ ಕಿರಿಮೀನು
ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ
ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು ? ಜಾತಿಗಳು
ನೀವೇಕೆ ಕೀಳಾಗಿರೊ ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಬಿತವಾಗಿ ನಾಯಿ
ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಬಿತವಾಯಿತು.
ಅದೆಂತೆಂದಡೆ ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ
ನಾಯಕನರಕ ತಪ್ಪದಯ್ಯಾ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
---
ಕೃತಯುಗ ಮೂವತ್ತೆರಡುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಕುಂಜರನೆಂಬ ಆನೆಯ ಕೊಂದು
ಹೋಮವನಿಕ್ಕಿದರು ಬ್ರಾಹ್ಮಣರು.
ತ್ರೇತಾಯುಗ ಹದಿನಾರುಲಕ್ಷವರುಷದಲ್ಲಿ ಬ್ರಾಹ್ಮಣರು
ಹೋಮವನಿಕ್ಕುವಾಗ
ಮಹಿಷನೆಂಬ ಕರಿ ಎಮ್ಮೆಯ
ಮಗನ ಕೊಂದು ಹೋಮವನಿಕ್ಕಿದರು.
ದ್ವಾಪರಯುಗ ಎಂಟುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಅಶ್ವನೆಂಬ ಕುದುರೆಯ ಕೊಂದು
ಹೋಮವನಿಕ್ಕಿದರು ಬ್ರಹ್ಮಣರು.
ಕಲಿಯುಗ ನಾಲ್ಕು ಲಕ್ಷವರುಷದಲ್ಲಿ
ಹೋಮವನಿಕ್ಕುವಾಗ
ಜಾತಿಯಾಡಿನ ಮಗ ಹೋತನಕೊಂದು
ಹೋಮವನಿಕ್ಕಿದರು ಬ್ರಾಹ್ಮಣರು.
ಅಣೋರಣೀಯಾನ್ ಮಹತೋ ಮಹೀಯಾನ್ ಎಂದುದಾಗಿ,
ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗಜಂಗಮಕ್ಕೆ
ಶರಣೆನ್ನದೆ
ಮುನ್ನ ಒಂಟಿಬ್ರಾಹ್ಮಣನ ಕಂಡು
ಶರಣಾರ್ಥಿ ಎಂದಡೆ
ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ
ಹಂದಿಯ ಬಸುರಲ್ಲಿ ಬಪ್ಪುದು
ತಪ್ಪದು ಕಾಣಾ.
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.
--
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲದ
ಸತ್ಯಶುದ್ಧವಿಲ್ಲದುದು ಕಾಯಕವಲ್ಲದ
ಆಸೆಯೆಂಬುದು ಭವದ ಬೀಜದ
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
--
ಗುರುವಿದ್ದಂತೆ ಪರರಿಗೆ ನೀಡಬಹುದೆ ?
ಮನೆಯ ಆಕಳು ಉಪವಾಸ ಇರಲಾಗಿ
ಪರ್ವತಕ್ಕೆ ಸೊಪ್ಪೆಯ ಹೊರಬಹುದೆ
?
ಎಂಬ ಪರವಾದಿ ನೀಕೇಳು.
ಗುರುವು ಶಿಷ್ಯಂಗೆ ಲಿಂಗವಕೊಟ್ಟು
ತಾನು ವ್ರತಗೇಡಿಯಾಗಿ ಹೋಗುವಲ್ಲಿ
ಪರರ ಪಾದೋದಕ ಪ್ರಸಾದದಿಂದ
ಪವಿತ್ರನಾದಕಾರಣ,
ಪರರ ಕಂಡರೆ ತನ್ನಂತೆ
ಕಾಣ್ಬು ಎಂದು
ಗುರುವು ಹೇಳಿದ ವಾಕ್ಯವ
ಮರೆದಿರಲ್ಲ ?
ಅಳಿಯ ಒಡೆಯರು, ಮಗಳು
ಮುತ್ತೈದೆ,
ಮನೆದೇವರಿಗೆ ಶರಣೆಂದರೆ ಸಾಲದೆ ?
ಎಂಬ ಅನಾಚಾರಿಗಳ ಮಾತು
ಅದಂತಿರಲಿ.
ಜಂಗಮದೇವರ ಪ್ರಾಣವೆಂಬ ಭಕ್ತರು
ಲಿಂಗಜಂಗಮದ ಕೈಯ ಹೂವು,
ಹಣ್ಣು, ಕಾಯಿ, ಪತ್ರೆ,
ಹೋಗುವ ಬರುವ ಊಳಿಗವ
ಕೊಂಬಾತ ಭಕ್ತನಲ್ಲ.
ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ
ಇವರು ನಾಯಕ ನರಕಕ್ಕೆ
ಯೋಗ್ಯರಯ್ಯಾ.
ಇವರಿಬ್ಬರ ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
--
ತೂಬರದ ಕೊಳ್ಳಿಯಂತೆ ಉರಿವಾತ
ಭಕ್ತನೆ ?
ಹುಸಿದು ತಂದು ಮಾಡುವಾತ
ಭಕ್ತನೆ ?
ಭಕ್ತರ ಕುಲವನೆತ್ತಿ ನಿಂದಿಸುವಾತ
ಭಕ್ತನೆ ?
ನಿಂದಯಾ ಶಿವಭಕ್ತಾನಾಂ ಕೋಟಿ
ಜನ್ಮನಿ ಸೂಕರಃ |
ಸಪ್ತಜನ್ಮನಿ ಭವೇತ್ ಕುಷ್ಠೀ ದಾಸೀಗರ್ಭೆಷು
ಜಾಯತೇ ||'
ಎಂದುದಾಗಿ, ತನ್ನ ಪ್ರಾಣದ
ಮೇಲೆ ಬಂದಡೂ ಬರಲಿ, ಇವರ
ಬಿಡಬೇಕು.
ಬಿಡದಿರಲು ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
--
ನಿಂದಿಸಿ ಕೊಂಬ ಪ್ರಸಾದ
ಕುನ್ನಿಯಪ್ರಸಾದ.
ಅವರು ತ್ರಿವಿಧಕ್ಕೆ ಇಚ್ಫಿಸರು.
ಅಲ್ಲಿ ನಿಂದಿಸಿ ಅವರ
ಬಿಟ್ಟಲ್ಲಿ,
ಅವರ ಹಿಂದೆ ಕೊಂಡುದು
ಅವರ ಮಲಮೂತ್ರದ
ಮುಂದೆ ಹುಳುಗೊಂಡವಯ್ಯಾ, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
--
ಭಾಗ್ಯವುಳ್ಳ ಪುರುಷಂಗೆ ಕಾಮಧೇನು
ಕಾಮಿಸಿದುದನೀವುದಯ್ಯಾ.
ನಿರ್ಭಾಗ್ಯ ಪುರುಂಷಗೆ ಕಾಮಧೇನು
ತುಡುಗುಣಿಯಾಗಿ ತೋರುವುದಯ್ಯಾ.
ಸತ್ಯಪುರುಷಂಗೆ ಕಲ್ಪವೃಕ್ಷ
ಕಲ್ಪಿಸಿದುದನೀವುದಯ್ಯಾ.
ಅಸತ್ಯಪುರುಷಂಗೆ ಕಲ್ಪವೃಕ್ಷ
ಬೊಬ್ಬುಳಿಯಾಗಿ ತೋರುವುದಯ್ಯಾ.
ಧರ್ಮಪುರುಷಂಗೆ ಚಿಂತಾಮಣಿ
ಚಿಂತಿಸಿದುದನೀವುದಯ್ಯಾ.
ಅಧರ್ಮಪುರುಷಂಗೆ ಚಿಂತಾಮಣಿ
ಗಾಜಿನಮಣಿಯಾಗಿ ತೋರುವುದಯ್ಯಾ.
ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ
ಜಂಗಮಲಿಂಗವಾಗಿ ತೋರುವುದಯ್ಯಾ.
ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ
ಮಾನವನಾಗಿ ತೋರುವುದಯ್ಯಾ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
--
ವ್ರತವೆಂಬುದು ನಾಯಕರತ್ನ;
ವ್ರತವೆಂಬುದು ಸುಪ್ಪಾಣಿಯ ಮುತ್ತು
ವ್ರತವೆಂಬುದು ಜೀವನ ಕಳೆದ
ವ್ರತವೆಂಬುದು ಸುಯಿದಾನ.
ವ್ರತ ತಪ್ಪಲು, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
--
ವ್ರತ ಹೋದಾಗಳೆ ಇಷ್ಟಲಿಂಗದ
ಕಳೆ ನಷ್ಟವವ್ವಾ.
ಅವರು ಲಿಂಗವಿದ್ದೂ ಭವಿಗಳು.
ಅದು ಹೇಗೆಂದಡೆ ಪ್ರಾಣವಿಲ್ಲದ
ದೇಹದಂತೆ.
ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ