ಸರ್ವಜ್ಞ (ಸಂಸ್ಕೃತದಲ್ಲಿ ‘ಎಲ್ಲವನ್ನೂ ತಿಳಿದವ’ ಎನ್ನಲಾಗಿದೆ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ (16) ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ. ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಮದ್ವತಿ ನದಿ ದಂಡೆಯ ಮೇಲಿರುವ ಮಾಸೂರ ಅಂಬಲೂರಲ್ಲಿ. ಇದು ಈಗ ಸರ್ವಜ್ಞನ ಮಾಸೂರು ಎಂದೇ ಪ್ರಸಿದ್ಧಿ ಪಡೆದಿದೆ.
ಅವನ
ಹೆತ್ತಮ್ಮ ಕುಂಬಾರ
ಮಾಳೆ,
ಪ್ರೀತಿಯಿಂದ ನಾಮಕರಣ
ಮಾಡಿದ
ಹೆಸರು
-ಪುಷ್ಪದತ್ತ. ಸಾಕು
ತಾಯಿ
ಮಲ್ಲಕ್ಕ. ತಂದೆ
ಬಸವರಸ.
ಹಾವೇರಿ
ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ
ಬ್ರಾಹ್ಮಣ, ಬಸವರಸನು, ಎಷ್ಟು
ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ
ಮಾಡಿ,
ಪುತ್ರಸಂತಾನದ ವರ
ಪಡೆಯಲು
ಕಾಶೀ
ಕ್ಷೇತ್ರಕ್ಕೆ ಹೊರಡುತ್ತಾನೆ.
ಭಕ್ತಿಯಿಂದ ಸೇವೆ
ಮಾಡಿದ
ಬಸವರಸನಿಗೆ ಕಾಶಿ
ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ
ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು
ನನ್ನ
ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು
ಹೇಳಲು
ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು,
ಪವಿತ್ರ
ಗಂಗಾಸ್ನಾನ ಮಾಡಿ,
ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ
ಗ್ರಾಮದ
ಹಾದಿ
ಹಿಡಿದನು.
ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ' [ಮಾಸೂರು] ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಕುಮದ್ವತಿ ನದಿ ಪ್ರವಾಹದಿಂದ ತುಂಬಿ ಹರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು.

ಕಾಶಿಯಿಂದ ತಂದ
ತೀರ್ಥ
ಪ್ರಸಾದಗಳನ್ನು ಕೊಟ್ಟು
ಅವಳ
ಸಂಗ
ಮಾಡಿದನು. ೯ ತಿಂಗಳ ನಂತರ ಮಾಳಿ
ದಿವ್ಯ
ತೇಜಸ್ಸಿನ ಗಂಡು
ಕೂಸಿಗೆ
ಜನ್ಮವಿತ್ತಳು. 'ಪುಷ್ಪದತ್ತ'ನೆಂದು
ನಾಮಕರಣವೂ ಆಯಿತು.
ಮುಂದೆ
ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ
ವರಪ್ರಸಾದದಿಂದ ಪಡೆದಿದ್ದನು.
ತಂದೆ
ತಾಯಿಗಳಿಂದ ಅಗಲಿ
ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ
ಮಾಡಿ
ಜ್ಞಾನಾರ್ಜನೆ ಮಾಡಿದನು. ಎಲ್ಲಾ
ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ
ಜನಪ್ರಿಯ ವಚನಗಳು
ಅವನ
ಬಗ್ಗೆ
ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು
ರಚಿಸಿದ
ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು
ಆಶುಕವಿಯಾದ್ದರಿಂದ, ಎಷ್ಟೋ
ಕವನಗಳು
ಅವನ
ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು
೭,೦೭೦ (7,070) ವಚನಗಳು ಲಭ್ಯವಾಗಿದೆಯೆಂದು ತಜ್ಞರ
ಅಭಿಪ್ರಾಯ.
ಈ ವ್ಯಕ್ತಿತ್ವ ಅನಿಕೇತನವಾದದ್ದು. ನಿಂತಲ್ಲಿ ನಿಲ್ಲದೆ ಗಾಳಿಯಂತೆ ಅಲೆದವನು ಇವನು. ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಸುತ್ತಿದವನು. ಕೈಯಲ್ಲೊಂದು ಕಪ್ಪರವನ್ನು ಹಿಡಿದು, ಹಿರಿದಾದ ನಾಡು ಎದುರಿಗಿರುವಾಗ ಪರಮೇಶನೆಂಬ ನಾಮವನ್ನು ನೆಚ್ಚಿ, ತಿರಿಯುತ್ತಲೇ ಊರೂರು ಸುತ್ತಿದ ಚಾರಣ ಕವಿ ಈತ. ಅಲ್ಲಮಪ್ರಭುವನ್ನು ಬಹುಮಟ್ಟಿಗೆ ನೆನಪಿಗೆ ತರುವ ಈ ‘ಜಂಗಮ’ನಿಗೆ ನೆಲವೇ ಹಾಸಿಗೆ, ಆಕಾಶವೇ ಹೊದಿಕೆ. ತನ್ನ ಪೂರ್ವೋತ್ತರಗಳನ್ನು ಕಳಚಿ ಎಸೆದು ಬಹುಮಟ್ಟಿಗೆ ದಿಗಂಬರನಾದ ಇಂಥವನ ತಂದೆ-ತಾಯಿ ಹಾಗೂ ಹುಟ್ಟಿನ ಗುಟ್ಟುಗಳನ್ನು ಇವನ ಕೆಲವು ತ್ರಿಪದಿಗಳಲ್ಲಿ ಗುರುತಿಸಬಹುದೆನ್ನುತ್ತಾರೆ ಕೆಲವರು.

ದಿವ೦ಗತ ರೆವೆರೆ೦ಡ್ ಉತ್ತ೦ಗಿ ಚನ್ನಪ್ಪನವರು
ಸರ್ವಜ್ಞನ ನುಡಿಗಳನ್ನು ಸ೦ಗ್ರಹಿಸಿ ಕನ್ನಡಕ್ಕೆ ಮಹದುಪಕಾರ ಮಾಡಿದ್ದಾರೆ.
ಸರ್ವಜ್ಞನ ಆಯ್ದ ಹನ್ನೆರಡು ಅಣಿಮುತ್ತುಗಳು:
*ಆ ದೇವ, ಈ ದೇವ ಮಾದೇವನೆನಬೇಡ.
ಆ ದೇವರ ದೇವ ಭುವನ ಪ್ರಾಣಿಗಳಿಗಾದವನೇ ಸರ್ವಜ್ಞ.
*ಚಿತ್ತವಿಲ್ಲಡೆ ಗುಡಿಯ ಸುತ್ತಿದೊಡೆ
ಫಲವೇನು, ಎತ್ತು ಗಾಣವ ಹೊತ್ತು ನಿತ್ಯದಲಿ, ಸುತ್ತಿ ಬಂದಂತೆ ಸರ್ವಜ್ಞ.
*ಏಳು ಕೋಟಿಯೆ ಕೋಟಿ, ಏಳು ಲಕ್ಷವೆ
ಲಕ್ಷ, ಏಳು ಸಾವಿರದ ಎಪ್ಪತ್ತು ವಚನಗಳ, ಹೇಳಿದನು ಕೇಳ ಸರ್ವಜ್ಞ
*ಮಜ್ಜಿಗೆ ಇಲ್ಲದ ಊಟ, ಮಜ್ಜನವ
ಕಾಣದಾ ಲಜ್ಜೆಗೆಟ್ಟ ಹೆಣ್ಣಂತೆ ಸರ್ವಜ್ಞ.
*ಸಾಲವನು ಕೊಂಬಾಗ ಹಾಲೋಗರುಂಡಂತೆ,
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ.
*ಹೆ೦ಡವನು ಕಡಿಯುವನು ಹ೦ದಿಗಿ೦ತಲೂ
ಕೀಳು, ಹ೦ದಿಯಾದರೂ ಹೊಲಸು ತಿ೦ದು ಶುದ್ದಿಮಾಡುವುದು, ಹೆ೦ಡ ಕಡಿದವನಿ೦ದೇನು ಫಲ ಸರ್ವಜ್ಞ.
*ಬೂದಿಯನು ಹಚ್ಚಲು ಕೈಲಾಸಕ್ಕೇ
ಹೋಗುವನೆ೦ಬರು, ಬೂದಿಯಲೇ ಹೊರಳಾಡಿದ ಕತ್ತೆ ಕೈಲಾಸಕ್ಕೇ ಹೋಗಲು೦ಟೆ ಸರ್ವಜ್ಞ.
*ಮೂರ್ಖನಿಗೆ ನೂರ್ಕಾಲ ಬುದ್ದಿ
ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಸುರಿದ೦ತೆ ಸರ್ವಜ್ಞ.
*ನುಡಿ ಬಲ್ಲವನು ಬಾವಿಯಾ ನೀರು
ಮೇಲ್ತ೦ದ ಏತದ೦ತೆ, ನುಡಿ ಬಲ್ಲದವನು ಏತದಾ ನೇಣಿನ ಹಗ್ಗದ೦ತೆ ಸರ್ವಜ್ಞ.
*ಬಲ್ಲವರಿ೦ದ ಬುದ್ದಿ ಕಲಿಯಲು ಬೇಕು,
ಇವರ ನುಡಿ ಕೇಳಿ ಮನವ ತಿದ್ದಿಕೊಳ್ಳಲುಬೇಕು, ಆಗಿ ಹೋದುದಕ್ಕೆ ಮರುಗದೇ ಮು೦ದಕ್ಕೆ ಸರಿಯಾಗಿ ನಡೆಯಬೇಕೆ೦ದ
ಸರ್ವಜ್ಞ.
*ವೆಚ್ಚಕ್ಕೆ ಹೊನ್ನು, ಬೆಚ್ಚನಾ
ಮನೆಯು, ಇಚ್ಚೆಯನರಿತು ಸತಿ ಇದ್ದೊಡೆ ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ.
*ಗುಣವಿರುವ ಗ೦ಡು ಹೆಣ್ಣುಗಳ ಸ೦ಗಾತ
ಹೆಜ್ಜೇನು ಸವಿದ೦ತೆ, ಗುಣವಿರದ ಸ೦ಗಾತ ಕೊಚ್ಚೆಗು೦ಡಿಯ ಹ೦ದಿಯಾ ತೆರನ೦ತೆ ಸರ್ವಜ್ಞ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ
No comments:
Post a Comment