Followers

Tuesday, September 17, 2019

ಚನ್ನಬಸವಣ್ಣ

ಹನ್ನೆರಡನೆಯ ಶತಮಾನ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿಚನ್ನಬಸವಣ್ಣನವರದು ಬಹು ಪ್ರಮುಖವಾದುದುಇವರ ಜೀವಿತ ಕಾಲಾವಧಿ ತೀರಾ ಕಡಿಮೆಚನ್ನಬಸವಣ್ಣನವರು ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು ಮಾತ್ರಹನ್ನೆರಡನೆಯ ಶತಮಾನದ ಯುಗಪುರುಷನೂಸಾಮಾಜಿಕ ಬದಲಾವಣೆಗಳ ಹರಿಕಾರನೂಅಸಮಾನತೆಯ ವಿರುದ್ದ ದನಿಯೆತ್ತಿವ್ಯವಸ್ಠೆಯ ಆಕ್ರೋಶಕ್ಕೆ ಗುರಿಯಾದಬಸವಣ್ಣನವರ ಸೋದರಳಿಯ ಚನ್ನಬಸವಣ್ಣ.ಬಸವಣ್ಣನವರ ಸೋದರಳಿಯನೆಂಬುದಕ್ಕಿಂತಲೂಸ್ವ ಸಾಮರ್ಥ್ಯ ಮತ್ತು ಸಾಧನೆಗಳಿಂದ ಕೀರ್ತಿವಂತವಾದ ವ್ಯಕ್ತಿತ್ವ ಚನ್ನಬಸವಣ್ಣನದು.

ಚನ್ನ ಬಸವಣ್ಣನವರ ತಾಯಿ ಅಕ್ಕನಾಗಾಯಿ ಅಥವಾ ನಾಗಲಾಂಬಿಕೆ. ಸ್ವತಃ ಚನ್ನಬಸವಣ್ಣನವರ ವಚನಗಳಿಂದಇತರ ವಚನಕಾರರ ಉಕ್ತಿಗಳಿಂದ ಮತ್ತು ಪುರಾಣಗಳಿಂದ ಚನ್ನಬಸವಣ್ಣನವರ ತಾಯಿಯ ಬಗ್ಗೆ ವಿವರಗಳು ಸಾಕಷ್ಟು ದೊರಕುತ್ತವೆಆದರೆ ಚನ್ನಬಸವಣ್ಣನವರ ತಂದೆಯ ಬಗ್ಗೆ ಸಿಗುವ ವಿವರಗಳುಹೆಚ್ಚು ಕಾಲ್ಪನಿಕವಾಗಿವೆಕ್ರಿ.೧೪೨೫ ವರೆಗೆ ಚನ್ನಬಸವಣ್ಣನವರ ಜನನದ ಬಗ್ಗೆ ಸರಿಯಾದ ವಿವರಗಳಿಲ್ಲಸು೧೪೨೫ರಲ್ಲಿ ಲಕ್ಕಣ್ಣ ದಂಡೇಶನು ತನ್ನ ಶಿವ ತತ್ವ ಚಿಂತಾಮಣಿಯಲ್ಲಿ ಶರಣರ ಪ್ರಸಾದ ಸೇವನೆಯಿಂದ ನಾಗಲಾಂಬಿಕೆ ಗರ್ಭ ಧರಿಸತ್ತಾಳೆ ಎಂದು ಬರೆಯುತ್ತಾನೆ.

ಇನ್ನೂ ಹಲವರು ಬಸವನ ಒಕ್ಕುಮಿಕ್ಕ ಪ್ರಸಾದದಿಂದ, ಇನ್ನೂ ಹಲವರು ಡೋಹರ ಕಕ್ಕಯ್ಯನ ಒಕ್ಕು ಮಿಕ್ಕ ಪ್ರಸಾದದಿಂದ ಚನ್ನಬಸವಣ್ಣನ ಜನ್ಮವಾಯಿತೆಂದೂ ಕಲ್ಪಿಸುತ್ತಾರೆಕಾಲಮಾನಗಳು ಶರಣರ ಜೀವಿತಾವಧಿಗಳಿಗೆ ಇವಾವೂ ಸಹ ಐತಿಹಾಸಿಕ ವಾಗಿ ಹೊಂದಿಕೆಯಾಗುವುದಿಲ್ಲ. ಒಕ್ಕು ಮಿಕ್ಕ ಪ್ರಸಾದದ ಕಥೆಗಳನ್ನು ನಂಬುವುದಾದರೆ ಚನ್ನಬಸವಣ್ಣನ ಜನನ ಕಲ್ಯಾಣದಲ್ಲಿ ಸಂಭವಿಸಿತೆಂದು ಒಪ್ಪಬೇಕಾಗುತ್ತದೆ. ಇದಕ್ಕೆ ಕಾಲದ ಹೊಂದಾಣಿಕೆಯಾಗುವುದಿಲ್ಲ. ಬಸವಣ್ಣನು ಕಲ್ಯಾಣಕ್ಕೆ ಬರುವ ವೇಳೆಗೆ ಚನ್ನಬಸವಣ್ಣನಿಗೆ ಕನಿಷ್ಟ ೧೦-೧೨ ವರ್ಷಗಳಾದರೂ ಆಗಿರಲೇಬೇಕಾಗುತ್ತದೆ.

ಅಂದರೆ ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.. ೧೫೦೦ರರಲ್ಲಿ ರಚನೆಯಾದ ಸಿಂಗಿರಾಜ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜನು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟನಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.

ಕಾಲಜ್ಞಾನ ವಚನಗಳ ಪ್ರಕಾರ , ಚನ್ನಬಸವಣ್ಣನ ಜನನ, ನಂದನ ನಾಮ ಸಂವತ್ಸರದ ವೈಶಾಖ ಶುದ್ದ ಪಾಡ್ಯ ಮಂಗಳವಾರ ಪ್ರಾತಃಕಾಲ ಕೃತ್ತಿಕಾ ನಕ್ಷತ್ರದಲ್ಲಿ (ಕ್ರಿ.. ೧೧೪೪) ಎಂದು ತಿಳಿದು ಬರುತ್ತದೆ. ರಾಕ್ಷಸ ನಾಮ ಸಂವತ್ಸರದ ಕಾರ್ತೀಕ ಮಾಸದಲ್ಲಿ ಉಳವಿ ಯಲ್ಲಿ ಲಿಂಗೈಕ್ಯ (ಕ್ರಿ..೧೧೬೮). ಎರಡರ ನಡುವಣ ಕಾಲಾವಧಿ ಕೇವಲ ೨೪ ವರ್ಷಗಳು.

"ಚನ್ನಬಸವಣ್ಣ"ನು ಸು ಕ್ರಿ.. ೧೧೫೬ರಲ್ಲಿ ಸ್ಥಾಪಿಸಲಾದ ಶಿವಾನುಭವ ಮಂಟಪದಲ್ಲಿ ಸಕ್ರಿಯವಾಗಿ ಪಾತ್ರ ವಹಿಸುತ್ತಾನೆ, ಆಗ ಅವನಿಗೆ ಕೇವಲ ಹನ್ನೆರಡು ವರ್ಷ ಇರಬಹುದು. ಲಿಂಗಾಯತ ಧರ್ಮ ಸಾಂಪ್ರದಾಯಕ ವಚನಗಳನ್ನು ಪರಿಷ್ಕರಿಸಿಷಟ್ಸ್ಥಲ ಸಂಪ್ರದಾಯಕ್ಕೆ ನೆಲೆಯನ್ನು ಕಲ್ಪಿಸಿದ ಪ್ರಮುಖರಲ್ಲಿ, ಚನ್ನಬಸವಣ್ಣನವರ ಹೆಸರು ಮೊದಲನೆಯದುಚನ್ನ ಬಸವಣ್ಣನವರ ವಚನಗಳೂ ಸಹ ತುಂಬಾ ಅನುಭಾವಪೂರ್ಣವಾಗಿಲಿಂಗಾಯತ ಸಿದ್ದಾಂತವನ್ನು ವಿವರಿಸುತ್ತವೆ.

ಕಲ್ಯಾಣದ ಕ್ರಾಂತಿಯ ನಂತರ ಕಲ್ಯಾಣದಲ್ಲಿದ್ದ ಶರಣರಿಗೆ ನೆಲೆ ತಪ್ಪಿ, ದಿಕ್ಕು ದಿಕ್ಕಿಗೆ ಚದುರಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸೊನ್ನಲಾಪುರಕ್ಕೆ, ಶ್ರೀಶೈಲಕ್ಕೆ ಹೀಗೆ ವಿವಿಧ ಸ್ಥಳಗಳಿಗೆ, ತಂಡಗಳು ತೆರಳಿದವು. ಶರಣರ ಬಹು ದೊಡ್ಡ ಗುಂಪು, ಚನ್ನಬಸವಣ್ಣನವರ ನೇತೃತ್ವದಲ್ಲಿ, ಉಳವಿಯ ಕಡೆಗೆ ಹೊರಟಿತು. ಚಿಕ್ಕ ವಯಸ್ಸಿನ ಚನ್ನಬಸಣ್ಣನವರ ಹೆಗಲ ಮೇಲೆ ಇಂಥ ಗುರುತರವಾದ ಹೊಣೆಗಾರಿಕೆ ಬಿದ್ದುದನ್ನು, ತುಂಬಾ ಕಷ್ಟದಿಂದ ಅವರು ನಿಭಾಯಿಸಿದರು.

ಮಾರ್ಗ ಮಧ್ಯದಲ್ಲಿಕಲ್ಯಾಣದ ಸೈನ್ಯ ಶರಣರನ್ನು ಅಡ್ಡಗಟ್ಟಿ ಮಾರಣ ಹೋಮವನ್ನು ನಡೆಸಿತುಆಗ ಶರಣರಿಗೆ ಅನಿರೀಕ್ಷಿತವಾದ ಸಹಾಯ ಒದಗಿಘೋರ ಯುದ್ದದಲ್ಲಿ ಕಲ್ಯಾಣದ ಸೈನ್ಯ ಸೋತು ಹಿಮ್ಮೆಟ್ಟಿತು ಅನಿರೀಕ್ಷಿತ ಸಹಾಯ ಯಾರಿಂದ ದೊರಕಿತೆಂಬುದರ ಬಗ್ಗೆ, ವಿವರಣೆಗಳು ಲಭ್ಯವಿಲ್ಲಡಾ.ಎಚ್ತಿಪ್ಪೇರುದ್ರಸ್ವಾಮಿಯವರು ತಮ್ಮ ಅಳಿವಿನಿಂದ ಉಳಿವಿಗೆ ಕಾದಂಬರಿಯಲ್ಲಿ ಕೆಲವು ವಿವರಣೆಗಳನ್ನು ಒದಗಿಸಲು ಪ್ರಯತ್ನಿಸಿದ್ದಾರೆ. ನಂತರ ಚನ್ನಬಸವಣ್ಣ ನವರು ಹೆಚ್ಚುಕಾಲ ಬದುಕಲಿಲ್ಲ ಉಳವಿಯಲ್ಲಿಯೇ ಅವರು ಶಿವೈಕ್ಯರಾದರು. ಹೀಗೆ ಚನ್ನಬಸವಣ್ಣ ಬದುಕಿದ್ದು ಸ್ವಲ್ಪ ಕಾಲವೇ ಆದರೂ; ಸಾಧಿಸಿದ್ದು, ಕೀರ್ತಿಶಾಲಿಯಾದದ್ದು ತುಂಬಾ ಹೆಚ್ಚು.

ಚೆನ್ನಬಸವಣ್ಣ ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನರಾದನರು ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನ ಮಹಾಮನೆಯ ಕಾರ್ಯದಲ್ಲಿ ನೆರವಾಗಿ ಧರ್ಮೊದ್ಧಾರ ಕಾರ್ಯಗಳಲ್ಲಿ ಸಹಯಕರಾದವರು. ಅನುಭವ ಮಂಟಪದ ಎಲ್ಲಾ ಕಾರ್ಯಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ನಡೆಯುತ್ತಿದ್ದವು. ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮನಿಗೆ ಲಿಂಗಧಾರಣೆ ಮಾಡಿದ ಮಹಾಮಹಿಮಶಾಲಿ. ಈತ ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ದಿವ್ಯತ್ವವನ್ನು ಗ್ರಹಿಸಿ ಶಿವಯೋಗ ಶಕ್ತಿಯನ್ನು ಅರಿತ ಅವರು ಆಕೆಯನ್ನು ಹೀಗೆ ಸ್ತುತಿಸಿದ್ದಾರೆ.
ಅಜಕೋಟಿ ವರುಷದವರೆಲ್ಲರೂ ಹಿರಿಯರೇ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ
ನಮ್ಮ ಮಹಾದೇವಿಯಕ್ಕಂಗಾಯ್ತು.”
ಚೆನ್ನಬಸವಣ್ಣ ಶಿವಪಥದಲ್ಲಿ ಆಚಾರ್ಯರಾಗಿದ್ದಂತೆಯೇ ರಾಜನೀತಿಶಾಸ್ತ್ರಜ್ಞರಾಗಿದ್ದರು, ಶೂನ್ಯಪೀಠದ ಅಧ್ಯಕ್ಷರಾದರು (ಪ್ರಭುದೇವರ ಅನಂತರ ಚನ್ನಬಸವಣ್ಣ ಶೂನ್ಯಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ). ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ ಮತ ಪ್ರಕ್ರಿಯೆಗಳನ್ನು ರೂಪಿಸಿದರು. ಅವರು 1500 ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವರು. ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಮತ್ತು ವಚನ ಸಂಪತ್ತನ್ನು ರಕ್ಷಿಸುವ ಹೊಣೆಹೊತ್ತು ಹೋರಾಡಿ ಕೊನೆಗೆ ಅವರು ಉಳವಿಯಲ್ಲಿ ಲಿಂಗೈಕ್ಯರಾದರು. ಅವರ ವಚನವೊಂದರಲ್ಲಿ ದೇವರ ನಿಲುವನ್ನು ರೀತಿ ಹೇಳಿದ್ದಾರೆ.
ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡ ಚೆನ್ನಸಂಗಯ್ಯ ನಿಮ್ಮ ನಿಲುವು.”

ಗವಿಮಠ: ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ಲಿಂಗಾಯತ ಸಾಧಕರು ವಾಸವಾಗಿದ್ದರು ಎನ್ನಲಾಗುತ್ತದೆ. ಇಲ್ಲಿ ಅಕ್ಕನಾಗಮ್ಮ ವಾಸಿಸಿದ ಗವಿ ಇದೆ ಎನ್ನುತ್ತಾರೆ.

ಉಳವಿ:
ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರು ಅಂತರ್ಜಾತಿ ಮದುವೆ ನಡೆಸಿದಾಗ ಕಲ್ಯಾಣ ಕ್ರಾಂತಿಯಾಗಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು. ಬಸವಣ್ಣನವರ ಅಳಿಯ ಚನ್ನಬಸವಣ್ಣ,ಅಕ್ಕ ನಾಗಲಾಂಬಿಕೆ ಹಾಗೂ ಇತರ ಶರಣರ ದಂಡು ಕಟ್ಟಿಕೊಂಡು ಸುರಕ್ಷಿತ ಜಾಗ ಹುಡುಕಿ ಹೊರಟರು. ಶರಣರು ರಚಿಸಿದ ವಚನ ಸಾಹಿತ್ಯ ಗಂಟುಗಳು ಶರಣರ ಹೆಗಲ ಮೇಲಿದ್ದವು. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಹೊರಟ ಇವರು ತಲುಪಿದ್ದು ದೂರದ ಗೋವಾ ಬಳಿಯ ಕಾಡಿನ ಬೆಟ್ಟದ ಹತ್ತಿರ ಬಂದು ಉಳಿದು ಕೊಂಡರು (ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು). ಬಿಜ್ಜಳನ ಸೈನಿಕರ ಜೊತೆ ಹೊಡೆದಾಡುತ್ತಲೇ ಜಾಗಕ್ಕೆ ಅವರು ಬಂದು ಮುಟ್ಟಿದ್ದರು. ಅಲ್ಲೇ ಲಿಂಗೈಕ್ಯರಾದರು. ಅಲ್ಲಿಯೇ ಚನ್ನಬಸವಣ್ಣನವರ ಸಮಾಧಿ ಯನ್ನು ಕಟ್ಟಲಾಗಿದೆ. ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ
ಶರಣರು ಬಂದುಉಳಿದುಕೊಂಡದ್ದರಿಂದ ಸ್ಥಳವುಉಳವಿಅಂತ ಆಯಿತು (ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು). ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಂದು ಅದುವೇ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಾಗಿದೆ.

ಹರಳಯ್ಯನವರ ಚಿಲುಮೆ:
ಬಿಜ್ಜಳನು ಹರಳಯ್ಯನವರನ್ನು ಅನೆ ಕಾಲಿಗೆ ಕಟ್ಟಿ ಎಳೆಸಿದಾಗ ಅವರು ಲಿಂಗೈಕ್ಕ್ಯರಾಗುತ್ತಾರೆ. ನಂತರ ಬಿಜ್ಜಳನ ಸೈನ್ಯ ಮತ್ತು ಜಾತಿ ವಾದಿಗಳು ವಚನಗಳನ್ನು ನಾಶಪಡಿಸಲು ಮುಂದಾಗುತ್ತಾರೆ. ಶರಣರು ವಚನ ಸಾಹಿತ್ಯದ ರಕ್ಷಣೆಗಾಗಿ ಉಳವಿ ತಲುಪುತ್ತಾರೆ. ಅಲ್ಲಿರುವ ಒಂದು ಚಿಲುಮೆಗೆ ಹುತಾತ್ಮರಾದ ಹರಳಯ್ಯನವರ ಹೆಸರಿಡುತ್ತಾರೆ. ನೀರಿನ ಚಿಲುಮೆ ಇನ್ನು ಇದೆ, ಅದುವೇ ಹರಳಯ್ಯನವರ ಚಿಲುಮೆ.

ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು:
ಕಲ್ಯಾಣದ ಕ್ರಾಂತಿ ಆದಾಗ ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು. ಉಳವಿಯ ಬಸವಣ್ಣನ ಗುಡಿಯ ಮುಂಬಾಗ ಈಗ ವೀರಗಲ್ಲನ್ನು ಕಾಣಬಹುದು. ವಚನ ಕ್ರಾಂತಿಗೆ ಯುದ್ದದ ಮಾಹಿತಿಗೆ ಮುನ್ನುಡಿಗೆ ಪುಷ್ಟಿ ಮತ್ತು ಆಧಾರ ನೀಡುವಂತಹದು.
ಇಂದು ಇದು ಲಿಂಗಾಯತ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ.

ಉಳುವಿಗೆ ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಬರಲು ಎರಡು ಅರಣ್ಯ ಮಾರ್ಗಗಳಿವೆ೧೨ ನೇ ಶತಮಾನದಲ್ಲಿ ಚನ್ನಬಸವಣ್ಣನವರು ಲಿಂಗೈಕ್ಯ ಆಗುವ ಮೊದಲು ಕಲ್ಯಾಣ ದಿಂದ ಉಳವಿಗೆ ಬಂದರು. ತಾಯಿ ಅಕ್ಕನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಪವಿತ್ರ ಸಮಾಧಿ ಹತ್ತಿರದಲ್ಲಿ ಇದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.
ಉಳವಿಯು ಪಶ್ಚಿಮ ಘಟ್ಟಗಳಲ್ಲಿ ಇದ್ದು ಇಲ್ಲಿನ ದಟ್ಟ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಸಾರಂಗ, ನಾಗರಹಾವು ಮತ್ತು ಇತರ ವನ್ಯಜೀವಿಗಳಿವೆ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ 

Tuesday, September 3, 2019

ಸರ್ವಜ್ಞ

ಸರ್ವಜ್ಞ (ಸಂಸ್ಕೃತದಲ್ಲಿ ‘ಎಲ್ಲವನ್ನೂ ತಿಳಿದವ’ ಎನ್ನಲಾಗಿದೆ). ಈತ ಕನ್ನಡದ ತ್ರಿಪದಿ ಸಾಹಿತ್ಯ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು  ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ (16) ನೇ ಶತಮಾನ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ. ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಮದ್ವತಿ ನದಿ ದಂಡೆಯ ಮೇಲಿರುವ ಮಾಸೂರ ಅಂಬಲೂರಲ್ಲಿ. ಇದು ಈಗ ಸರ್ವಜ್ಞನ ಮಾಸೂರು ಎಂದೇ ಪ್ರಸಿದ್ಧಿ ಪಡೆದಿದೆ.


ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.

ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು

ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ' [ಮಾಸೂರು] ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಕುಮದ್ವತಿ ನದಿ ಪ್ರವಾಹದಿಂದ ತುಂಬಿ ಹರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು.

ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು.

ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ,೦೭೦ (7,070) ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ.

ವ್ಯಕ್ತಿತ್ವ ಅನಿಕೇತನವಾದದ್ದು. ನಿಂತಲ್ಲಿ ನಿಲ್ಲದೆ ಗಾಳಿಯಂತೆ ಅಲೆದವನು ಇವನು. ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಸುತ್ತಿದವನು. ಕೈಯಲ್ಲೊಂದು ಕಪ್ಪರವನ್ನು ಹಿಡಿದು, ಹಿರಿದಾದ ನಾಡು ಎದುರಿಗಿರುವಾಗ ಪರಮೇಶನೆಂಬ ನಾಮವನ್ನು ನೆಚ್ಚಿ, ತಿರಿಯುತ್ತಲೇ ಊರೂರು ಸುತ್ತಿದ ಚಾರಣ ಕವಿ ಈತ. ಅಲ್ಲಮಪ್ರಭುವನ್ನು ಬಹುಮಟ್ಟಿಗೆ ನೆನಪಿಗೆ ತರುವ ಜಂಗಮನಿಗೆ ನೆಲವೇ ಹಾಸಿಗೆ, ಆಕಾಶವೇ ಹೊದಿಕೆ. ತನ್ನ ಪೂರ್ವೋತ್ತರಗಳನ್ನು ಕಳಚಿ ಎಸೆದು ಬಹುಮಟ್ಟಿಗೆ ದಿಗಂಬರನಾದ ಇಂಥವನ ತಂದೆ-ತಾಯಿ ಹಾಗೂ ಹುಟ್ಟಿನ ಗುಟ್ಟುಗಳನ್ನು ಇವನ ಕೆಲವು ತ್ರಿಪದಿಗಳಲ್ಲಿ ಗುರುತಿಸಬಹುದೆನ್ನುತ್ತಾರೆ ಕೆಲವರು


ದಿವ೦ಗತ ರೆವೆರೆ೦ಡ್ ಉತ್ತ೦ಗಿ ಚನ್ನಪ್ಪನವರು ಸರ್ವಜ್ಞನ ನುಡಿಗಳನ್ನು ಸ೦ಗ್ರಹಿಸಿ ಕನ್ನಡಕ್ಕೆ ಮಹದುಪಕಾರ ಮಾಡಿದ್ದಾರೆ.
ಸರ್ವಜ್ಞನ ಆಯ್ದ ಹನ್ನೆರಡು ಅಣಿಮುತ್ತುಗಳು:
*ಆ ದೇವ, ಈ ದೇವ ಮಾದೇವನೆನಬೇಡ. ಆ ದೇವರ ದೇವ ಭುವನ ಪ್ರಾಣಿಗಳಿಗಾದವನೇ ಸರ್ವಜ್ಞ.
*ಚಿತ್ತವಿಲ್ಲಡೆ ಗುಡಿಯ ಸುತ್ತಿದೊಡೆ ಫಲವೇನು, ಎತ್ತು ಗಾಣವ ಹೊತ್ತು ನಿತ್ಯದಲಿ, ಸುತ್ತಿ ಬಂದಂತೆ ಸರ್ವಜ್ಞ.
*ಏಳು ಕೋಟಿಯೆ ಕೋಟಿ, ಏಳು ಲಕ್ಷವೆ ಲಕ್ಷ, ಏಳು ಸಾವಿರದ ಎಪ್ಪತ್ತು ವಚನಗಳ, ಹೇಳಿದನು ಕೇಳ ಸರ್ವಜ್ಞ
*ಮಜ್ಜಿಗೆ ಇಲ್ಲದ ಊಟ, ಮಜ್ಜನವ ಕಾಣದಾ ಲಜ್ಜೆಗೆಟ್ಟ ಹೆಣ್ಣಂತೆ ಸರ್ವಜ್ಞ.
*ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ.
*ಹೆ೦ಡವನು ಕಡಿಯುವನು ಹ೦ದಿಗಿ೦ತಲೂ ಕೀಳು, ಹ೦ದಿಯಾದರೂ ಹೊಲಸು ತಿ೦ದು ಶುದ್ದಿಮಾಡುವುದು, ಹೆ೦ಡ ಕಡಿದವನಿ೦ದೇನು ಫಲ ಸರ್ವಜ್ಞ.
*ಬೂದಿಯನು ಹಚ್ಚಲು ಕೈಲಾಸಕ್ಕೇ ಹೋಗುವನೆ೦ಬರು, ಬೂದಿಯಲೇ ಹೊರಳಾಡಿದ ಕತ್ತೆ ಕೈಲಾಸಕ್ಕೇ ಹೋಗಲು೦ಟೆ ಸರ್ವಜ್ಞ.
*ಮೂರ್ಖನಿಗೆ ನೂರ್ಕಾಲ ಬುದ್ದಿ ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಸುರಿದ೦ತೆ ಸರ್ವಜ್ಞ.
*ನುಡಿ ಬಲ್ಲವನು ಬಾವಿಯಾ ನೀರು ಮೇಲ್ತ೦ದ ಏತದ೦ತೆ, ನುಡಿ ಬಲ್ಲದವನು ಏತದಾ ನೇಣಿನ ಹಗ್ಗದ೦ತೆ ಸರ್ವಜ್ಞ.
*ಬಲ್ಲವರಿ೦ದ ಬುದ್ದಿ ಕಲಿಯಲು ಬೇಕು, ಇವರ ನುಡಿ ಕೇಳಿ ಮನವ ತಿದ್ದಿಕೊಳ್ಳಲುಬೇಕು, ಆಗಿ ಹೋದುದಕ್ಕೆ ಮರುಗದೇ ಮು೦ದಕ್ಕೆ ಸರಿಯಾಗಿ ನಡೆಯಬೇಕೆ೦ದ ಸರ್ವಜ್ಞ.
*ವೆಚ್ಚಕ್ಕೆ ಹೊನ್ನು, ಬೆಚ್ಚನಾ ಮನೆಯು, ಇಚ್ಚೆಯನರಿತು ಸತಿ ಇದ್ದೊಡೆ ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ.
*ಗುಣವಿರುವ ಗ೦ಡು ಹೆಣ್ಣುಗಳ ಸ೦ಗಾತ ಹೆಜ್ಜೇನು ಸವಿದ೦ತೆ, ಗುಣವಿರದ ಸ೦ಗಾತ ಕೊಚ್ಚೆಗು೦ಡಿಯ ಹ೦ದಿಯಾ ತೆರನ೦ತೆ ಸರ್ವಜ್ಞ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ 

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...