Followers

Sunday, July 5, 2020

ಮಸ್ತಾನಿ ಮಾ

ಮಸ್ತಾನಿ ಮಾ, ಸೂಫಿ ಸಂತಳು. ಸಾಮಾನ್ಯವಾಗಿ ಪ್ರಾರ್ಥನೆ ಅಥವಾ ಧ್ಯಾನ ಅಥವಾ ಜ್ಹಿಕ್ರ್ (Zikr: ದೇವರ ಹೆಸರಿನ ಲಯಬದ್ಧ ಪುನರಾವರ್ತನೆ) ಮಾಡುವುದರಲ್ಲೇ ವ್ಯಸ್ಥವಾಗಿರುತ್ತಿದ್ದಳು. ಆಕೆಯಲ್ಲಿ ದೈವಪ್ರೀತಿ ಅಸೀಮವಾಗಿತ್ತು. ಮಸ್ತಾನಿ ಮಾಳನ್ನು ಭೇಟಿಯಾಗಲು ಬರುವವರು ಆಕೆ ಜ್ಹಿಕ್ರ್ ಮಾಡುತ್ತಿರುವುದನ್ನು ಕಂಡರೆ, ಆಕೆಯೊಂದಿಗೆ ಅವರೂ ಕೂಡಾ ಕೂತು ಧ್ಯಾನ ಮಾಡುತ್ತಿದ್ದರು.

ಒಂದು ದಿನ, ಅವಳನ್ನು ನೋಡಲು ಪುರುಷರು, ಮಹಿಳೆಯರು ಮತ್ತು ಮಕ್ಕಳ ಗುಂಪು ಇಳಿಯಿತು. ಮಸ್ತಾನಿ ಮಾ ಜ್ಹಿಕ್ರ್ ಮಾಡುತ್ತಿರುವುದನ್ನು ನೋಡಿ, ಅವರು ಕುಳಿತುಕೊಂಡು ಅವಳ ಎದುರು ಧ್ಯಾನ ಮಾಡಲು ಪ್ರಾರಂಭಿಸಿದರು. ಅವರು ಆಹಾರಕ್ಕಾಗಿ ಅಥವಾ ನೀರಿಗಾಗಿ ಮಧ್ಯೆ ಎದ್ದೇಳಲಿಲ್ಲ. ಮಧ್ಯರಾತ್ರಿಯ ಹೊತ್ತಿಗೆ, ಮಸ್ತಾನಿ ಮಾ ಕಣ್ಣು ತೆರೆದಳು. ಅವಳನ್ನು ಭೇಟಿ ಮಾಡಲು  ಸಂದರ್ಶಕರು ಆಹಾರ ಮತ್ತು ನೀರಿಲ್ಲದೆ ಬಹಳ ಸಮಯದಿಂದ ಕಾಯುತ್ತಿದ್ದರು ಎಂದು ಅರಿತಳು. ಮಸ್ತಾನಿ ಮಾ ಒಂದು ಮೂಲೆಯಲ್ಲಿ  ಖಾಲಿ ಬಿದ್ದಿರುವ   ಮಣ್ಣಿನ ಮಡಕೆಯನ್ನು ಒಲೆಯ ಮೇಲೆ ಇಡುವಂತೆ ಕೇಳಿಕೊಂಡರು ಮತ್ತು ಆ  ಮಡಿಕೆಯನ್ನು ಅಂಗಳದಲಿ ಬಿದ್ದಿರುವ ಎಲೆಗಳು, ಕಲ್ಲುಗಳು ಮತ್ತು ಮಣ್ಣಿನಿಂದ ತುಂಬಿಸಿ ನೀರಿನಲ್ಲಿ ಬೇಯಿಸಲು ಕೇಳಿಕೊಂಡಳು. ಅವಳು ನಂತರ ಸಹಾಯಕ್ಕಾಗಿ ದೇವರನ್ನು ಬೇಡಿಕೊಂಡಳು (ದುವಾ). ಸ್ವಲ್ಪ ಸಮಯದ ನಂತರ, ಮಡಕೆ ಒಳಗೆ ಸಂದರ್ಶಕರು ನೋಡಿದಾಗ ಅಕ್ಕಿ ಕುದಿಯುತ್ತಿರುವುದು ಕಂಡುಬಂತು. ಮಸ್ತಾನಿ ಮಾ ಅವರನ್ನು ಸಂದರ್ಶಕರು ಪ್ರಶ್ನಾರ್ಥಕವಾಗಿ  ನೋಡಿದರು. ಆಕೆ ಅವರಿಗೆ ಧೈರ್ಯಕೊಟ್ಟು ಹೇಳಿದಳು, “ಇದರ ಬಗ್ಗೆ ಅನ್ಯಥಾ ಯೋಚಿಸುವುದೇನೂ ಇಲ್ಲ. ಇದು ದೇವರ ಪ್ರೀತಿ ಆತನು ಕಲ್ಲು , ಮಣ್ಣು ಮತ್ತು ಎಲೆಗಳ ಮೂಲಕ ಆಹಾರವನ್ನು ಒದಗಿಸಲು ಶಕ್ತನಲ್ಲವೇ?” ಎಂದು ಹೇಳಿದಳು.
ಮಸ್ತಾನಿ ಮಾ ದರ್ಗಾ: ಟ್ಯಾನರಿ ರಸ್ತೆ, ಬೆಂಗಳೂರು
ಮಸ್ತಾನಿ ಮಾ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಯಾವಾಗ ಮತ್ತು ಎಲ್ಲಿಂದ ಅಲ್ಲಿ ಬಂದರೆಂಬುವುದು ಸ್ಪಷ್ಟವಾಗಿಲ್ಲ. ಮಸ್ತಾನಿ ಮಾ ಮಜ್ಜೂಬ್ (Majzoob) ಸೂಫಿ ಪಂಥಕ್ಕೆ ಸೇರಿದವಳಾಗಿದ್ದರಿಂದ, ಕೈಗೆ ದಪ್ಪ ಕಬ್ಬಿಣದ ಬಳೆ ಮತ್ತು ಕಾಲಿಗೆ ಕಬ್ಬಿಣದ ಕಡಗವನ್ನು ಧರಿಸುತಿದ್ದಳು. ಯಾರಿಗೂ ಭೇದ ಭಾವ ಮಾಡದೆ ಎಲ್ಲರನ್ನೂ ಆಶೀರ್ವದಿಸುತ್ತಿದ್ದಳು. ಬೆಂಗಳೂರಿನ ಪ್ರಸಿದ್ಧ ಸಮಕಾಲೀನ ಸೂಫಿ ಸಂತ ಹಜರತ್ ಖ್ವಾಜಾ ಖಾಸೀರ್ ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತನ್ನ ಶಿಷ್ಯರನ್ನು ಕಳುಹಿಸಿದ್ದರು.

ಅವಳ ಮರಣದ ನಂತರ ಅವಳ ಮುಖ ಹಳದಿ ಬಣ್ಣಕ್ಕೆ ತಿರುಗಿದೆ ಎಂದು ಹಜರತ್ ಖ್ವಾಜಾ ಖಾಸೀರ್ ಗೆ ಶಿಷ್ಯರು ತಿಳಿಸಿದಾಗ, ಅವಳು ಮಹಾನ್ ಸೂಫಿ ಎಂದು ಅವನಿಗೆ ಖಚಿತವಾಯಿತು. ಟ್ಯಾನರಿ ರಸ್ತೆಯ ಪಕ್ಕದ ಅಲ್ಲೆ ಇರುವ ಅವಳ ಸಮಾಧಿ, ಪ್ರಸ್ತುತ ಅನೇಕ ನಿಷ್ಠಾವಂತರನ್ನು ಆಕರ್ಷಿಸುತ್ತಿದೆ.

ಬೆಂಗಳೂರು ನಗರದಲ್ಲಿ ಎರಡು ಡಜನ್ ಸೂಫಿ ಸಂತರ ದರ್ಗಾಗಳಿವೆ ಆದರೆ ಈ ಸೂಫಿ ಸಂತರ ಜೀವನ-ಸಾಧನೆಗಳ ಬಹಳವೇನು ಗೊತ್ತಿಲ್ಲ. ವಾಸ್ತವದಲ್ಲಿ ಅಧಿಕೃತವಾಗಿ ಪುರುಷರಂತೆ ಮಹಿಳೆಯರನ್ನು ಸೂಫಿ ಸಂತರೆಂದು  ಸುಲಭವಾಗಿ ಗುರುತಿಸದೆ ಇರುವುದು ಅವರ ಬಗ್ಗೆ ತಿಳಿಯಲು ಕಷ್ಟಸಾಧ್ಯವಾಗುತ್ತದೆ. ಮಸ್ತಾನಿ ಮಾಳಂತೆ ಉಳಿದ ಇಬ್ಬರು ಮಹಿಳಾ ಸೂಫಿಗಳಾದ ಸೈಯಾದಾ ಬೀಬಿ ಮತ್ತು ಸೈಯಾದಾನಿ ಮಾ (ಇವರ ದರ್ಗಾಗಳು ಕ್ರಮವಾಗಿ ಸಿಟಿ ಮಾರ್ಕೆಟ್ ಮತ್ತು ರಿಚ್ಮಂಡ್ ಟೌನ್ನಲ್ಲಿವೆ) ಬಗ್ಗೆ ಹೆಚ್ಚಿನ ವಿಷಯಗಳು ತಿಳಿದಿಲ್ಲ.

ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಭಾರತೀಯ ಉಪಖಂಡ ಆಗ್ನೇಯ ಏಷ್ಯಾ ಸೇರಿದಂತೆ ಇಸ್ಲಾಮಿಕ್ ಪ್ರಪಂಚದಾದ್ಯಂತ ಮಹಿಳಾ ಸೂಫಿ ಸಂತರು ಕಂಡುಬಂದಿರುತ್ತಾರೆ. ಇವರಲ್ಲಿ ಎಲ್ಲರೂ  ಸೂಫಿ ಪಂಥದಲ್ಲಿ ಅರ್ಹ ತರಬೇತಿ ಹೊಂದಿದವರಲ್ಲ. ಅವರಲ್ಲಿ  ಹಲವಾರು ಮಂದಿ ಸ್ಥಳೀಯವಾಗಿ ಆಧ್ಯಾತ್ಮಿಕ ಅರ್ಹತೆಗಳನ್ನು ಹೊಂದಿದವರೆಂದು ಗುರುತಿಸಲಾಗಿದೆ ಮತ್ತು ಸಂತರಾಗಿ ಪೂಜಿಸಲಾಗುತ್ತದೆ.

ಉತ್ತರ ಆಫ್ರಿಕಾದ ಹೊರತಾಗಿ, ಅನಾಟೋಲಿಯಾ ಮತ್ತು ಇರಾನ್ ಹೆಚ್ಚಿನ ಸಂಖ್ಯೆಯ ಮಹಿಳಾ ಸೂಫಿ ಸಂತರ ದೇವಾಲಯಗಳನ್ನು ಹೊಂದಿವೆ. ಕುಟುಂಬ ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯ ಬೇಡಲು ಮಹಿಳಾ ಭಕ್ತರು ಅಲ್ಲಿಗೆ ಭೇಟಿ ನೀಡುತ್ತಾರೆ. ಹಾಗೆಯೇ ಅಪಾರ ಮಹಿಳಾ ಸೂಫಿ ಸಂತರು ಭಾರತ ಮತ್ತು ಪಾಕಿಸ್ತಾನಗಳಲ್ಲಿ ವಿಶೇಷವಾಗಿ ಸಿಂಧ್ ಮತ್ತು ಪಂಜಾಬ್ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ಈ ಸಂತರಿಗಾಗಿ ನಿರ್ಮಿಸಲಾದ ಅನೇಕ ದೇವಾಲಯಗಳಲ್ಲಿ  ಪುರುಷರಿಗೆ ಪ್ರವೇಶ ನಿರ್ಬಂಧವಿದೆ.

ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಬರಹ

No comments:

Post a Comment

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...