ದಕ್ಷಿಣ ಭಾರತದ ಕರಂಜ ನಗರ (ಕರ್ನಾಟಕ ರಾಜ್ಯ) ಎಂಬ ಸ್ಥಳದಲ್ಲಿ, 13 ನೇ ಶತಮಾನದಲ್ಲಿ ಧಾರ್ಮಿಕ ಬ್ರಾಹ್ಮಣ ದಂಪತಿಗಳಾದ ಮಾಧವ ಮತ್ತು ಅಂಬಭವಾನಿ ವಾಸಿಸುತ್ತಿದ್ದರು. ಈ ದೈವಭಕ್ತ ಮತ್ತು ಧಾರ್ಮಿಕ ದಂಪತಿಗೆ, ಕ್ರಿ.ಶ. 1275 ರಲ್ಲಿ ಒಬ್ಬ ಮಗನಾಗಿ ಜನಿಸಿದನು. ಈ ಮಗು ಭಗವಾನ್ ದತ್ತಾತ್ರೇಯನ ಅವತಾರವಾಗಿದ್ದು, ಮಹಾನ್ ಋಷಿ ಶ್ರೀಮದ್ ನ್ರುಸಿಂಹ ಸರಸ್ವತಿ ಎಂದು ಹೆಸರಾಯಿತು. ಮಗು ಹುಟ್ಟಿದಾಗಿನಿಂದ ‘ಓಂ’ (ಹಿಂದೂ ಪವಿತ್ರ ಪಠಣ) ಮಾತ್ರ ಜಪಿಸುತ್ತಿತ್ತು, ಹೀಗಾಗಿ ಮಾತಾಪಿತರಿಗೆ ಹುಡುಗ ಮೂಕನಾಗಿರುವುದರ ಬಗ್ಗೆ ಚಿಂತೆ ಕಾಡುತಿತ್ತು. ಅವನ 'ವ್ರತಬಂಧ' (ಪವಿತ್ರ ದಾರವನ್ನು ತೊಡುವ) ಸಮಾರಂಭದ ತನಕ ಪೋಷಕರು ಚಿಂತೆಯಿಂದಿದ್ದರು; ಮುಂದೆ ಮಗು ಕೇವಲ ಎಂಟು ವರ್ಷದವನಾದಾಗ ಎಲ್ಲಾ ನಾಲ್ಕು ವೇದಗಳನ್ನು (ಪವಿತ್ರ ಹಿಂದೂ ಧರ್ಮಗ್ರಂಥಗಳನ್ನು) ಪಠಿಸಲು ಪ್ರಾರಂಭಿಸಿನು ಮತ್ತು ವಿದ್ಯಾಸಂಪನ್ನರು ಇದನ್ನು ಕೇಳಿ ಆಶ್ಚರ್ಯಚಕಿತರಾಗುತ್ತಿದ್ದರು.
ತದನಂತರ ಆತನು ಕಾಶಿ (ಉತ್ತರ ಪ್ರದೇಶ ರಾಜ್ಯ, ಉತ್ತರ ಭಾರತ) ಗೆ ತಪಸ್ಸು ಮಾಡಲು ಹೊರಟನು. ಅವರ ಕಠಿಣ ತಪಸ್ಸಿನಿಂದ ಸಂತಸಗೊಂಡ ಶ್ರೀ ಕೃಷ್ಣ ಸರಸ್ವತಿ ಸ್ವಾಮಿ ಎಂಬ ತಪಸ್ವಿ ಅವನಿಗೆ ಸನ್ಯಾಸಾಶ್ರಮದ ದೀಕ್ಷೆಯನ್ನು ಕೊಟ್ಟು ಶ್ರೀಮದ್ ನ್ರುಸಿಂಹ ಸರಸ್ವತಿ ಎಂಬ ಹೆಸರನ್ನು ನೀಡಿದರು.
ಜೀವನಚರಿತ್ರೆ
ಶ್ರೀಮದ್ ನ್ರುಸಿಂಹ ಸರಸ್ವತಿ ಅವರ ಜೀವನ ಚರಿತ್ರೆ “ಶ್ರೀ ಗುರುಚಾರಿತ್ರ”, ಭಕ್ತರಿಗೆ ಮಾರ್ಗದರ್ಶನ ನೀಡುವಲ್ಲಿ ಅವರು ಮಾಡಿದ ಕಾರ್ಯಗಳ ವಿವರಗಳನ್ನು ಮತ್ತು ಭಕ್ತರಿಗೆ ಸಹಾಯ ಮಾಡಲು ಅವರು ಮಾಡಿದ ವಿವಿಧ ಪವಾಡಗಳ ಬಗ್ಗೆ ನಮಗೆ ತಿಳಿಸುತ್ತದೆ. ಅವರು ಗಣಗಾಪುರದಲ್ಲಿ (ಕರ್ನಾಟಕ ರಾಜ್ಯ, ದಕ್ಷಿಣ ಭಾರತ) ಬಹಳ ಕಾಲ ಇದ್ದರು ಮತ್ತು ಅಲ್ಲಿಂದ ತಪಸ್ಸು ಮಾಡಲು ಕಾರ್ಡಲಿ ಕಾಡುಗಳಿಗೆ ತೆರಳುವ ಮೊದಲು ತಮ್ಮ ಶಿಷ್ಯರು ಮತ್ತು ಭಕ್ತರಿಗೆ ತಮ್ಮ “ನಿರ್ಗುಣ ಪಾದುಕೆ” ಗಳನ್ನು ನೀಡಿದರು. ಅವರ ಶಿಷ್ಯರು ಆತನಿಗೆ ತೇಲುವ ಹೂವುಗಳ ಆಸನವನ್ನು ಸಿದ್ಧಪಡಿಸಿದರು, ಅದರ ಮೇಲೆ ಅವರು ಪಾತಾಲ್ ಗಂಗಾ ನದಿಯ ಪ್ರವಾಹದ ವಿರುದ್ಧ ಪ್ರಯಾಣಿಸಿ ಕಣ್ಮರೆಯಾದರು.
ಕಠಿಣ ತಪಸ್ಸು
ಅವರು ಸುಮಾರು 150 ವರ್ಷಗಳ ಕಾಲ ಶ್ರೀ ಶೈಲ ಪರ್ವತದ ಕಾರ್ಡಲಿ ಕಾಡುಗಳಲ್ಲಿ ಕಠಿಣ ತಪಸ್ಸು ಮಾಡಿದರು. ಇದರ ನಂತರ ಅವರು ಜಾವಾ, ಸುಮಾತ್ರಾ, ಇಂಡೋನೇಷ್ಯಾ, ಚೀನಾ, ಜಪಾನ್, ಆಸ್ಟ್ರೇಲಿಯಾ ಮುಂತಾದ ಸ್ಥಳಗಳನ್ನು ಒಳಗೊಂಡಂತೆ ವ್ಯಾಪಕವಾದ ತೀರ್ಥಯಾತ್ರೆ ಕೈಗೊಂಡರು, ಅನೇಕ ಜನರನ್ನು ಅವರ ದುಃಖದಿಂದ ಮುಕ್ತಗೊಳಿಸಿದರು ಮತ್ತು ಆಧ್ಯಾತ್ಮಿಕ ಹಾದಿಯಲ್ಲಿ ಮಾರ್ಗದರ್ಶನ ನೀಡಿದರು. ಅಂತಿಮವಾಗಿ, ಅವರು ಹಿಮಾಲಯದ ಶ್ರೇಣಿಗಳಿಗೆ ಬಂದರು, ಅಲ್ಲಿ ಅವರು ಅನೇಕ ಭಕ್ತರಿಗೆ ಜ್ಞಾನೋದಯ ನೀಡಿದರು. ನಂತರ ಪುನಃ ತಪಸ್ಸಿಗಾಗಿ ದೇವದಾರು ಮರದ ಕೆಳಗೆ ಕುಳಿತುಕೊಂಡರು. ಹಿಮಾಲಯದ ಈ ತಪಸ್ಸು ಸುಮಾರು 250 ವರ್ಷಗಳ ಕಾಲ ನಡೆಯಿತು, ಆದರೆ ಮರ ಕಡಿಯುವವನು ತಿಳಿಯದೆ ಶ್ರೀಮದ್ ನ್ರುಸಿಂಹ ಸರಸ್ವತಿಯವರ ದೇಹವನ್ನು ಆವರಿಸಿರುವ ಇರುವೆ ಗೂಡನ್ನು ಕೊಡಲಿಯಿಂದ ಕತ್ತರಿಸಿದನು. ಹೀಗೆ ಇವರ ತಪಸ್ಸು ಭಂಗವಾಯ್ತು. ನಂತರ ಭಾರತದ ಉಪಖಂಡದಾದ್ಯಂತ ಭಕ್ತರಿಗೆ ಮಾರ್ಗದರ್ಶನ ನೀಡುವ ಮೂಲಕ ವ್ಯಾಪಕ ಪ್ರಯಾಣಕ್ಕೆ ತೆರಳಿದರು
ಅಕ್ಕಲ್ಕೋಟ್ ನಿವಾಸಿ ಶ್ರೀ ಸ್ವಾಮಿ ಸಮರ್ಥ
ಈ ಪ್ರಯಾಣದ ಸಮಯದಲ್ಲಿ ಅವರು ವಿವಿಧ ಸ್ಥಳಗಳಲ್ಲಿ ವಿವಿಧ ಹೆಸರುಗಳಿಂದ ಜನಪ್ರಿಯರಾದರು. ಹೀಗೆ ಒಂದು ಸ್ಥಳದಲ್ಲಿ ಅವರನ್ನು ಚಂಚಲ್ ಭಾರತಿ ಎಂದು ಕರೆಯಲಾಗುತ್ತಿತ್ತು ಮತ್ತು ಇನ್ನೊಂದು ಸ್ಥಳದಲ್ಲಿ ಅವರನ್ನು ದಿಗಂಬರ ಸ್ವಾಮಿ ಎಂದು ಕರೆಯಲಾಗುತ್ತಿತ್ತು. ಅವರು ವಿವಿಧ ಸ್ಥಳಗಳಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತು ತಂಗಿದ್ದಾಗ ಅನೇಕ ಮಹಾನ್ ಸಾಧಕರಿಗೆ ಗುರುಗಳಾಗಿ ದೀಕ್ಷೆ ಹಾಗೂ ಮಾರ್ಗದರ್ಶನ ನೀಡಿದರು. ಅವರಲ್ಲಿ ಪ್ರಮುಖರು: ಶ್ರೀ ರಾಮಕೃಷ್ಣ ಪರಮಹಂಸ, ಶಿರಡಿಯ ಶ್ರೀ ಸಾಯಿ ಬಾಬಾ, ಶ್ರೀ ಶಂಕರ್ ಮಹಾರಾಜ್, ಶ್ರೀ ಶೆಗಾಂವ್ನ್, ಶ್ರೀ ಗಜಾನನ ಮಹಾರಾಜ್. ಅಂತಿಮವಾಗಿ ಅವರು ಅಕ್ಕಲ್ಕೋಟ್ (ಮಹಾರಾಷ್ಟ್ರ ರಾಜ್ಯ) ನಲ್ಲಿ ಕ್ರಿ.ಶ 1854 ರಿಂದ ಕ್ರಿ.ಶ 1878 ರವರೆಗೆ 24 ವರ್ಷಗಳ ಕಾಲ ವಾಸಿಸಿದರು ಆದ್ದರಿಂದ ಅವರು ಅಕ್ಕಲ್ಕೋಟ್ ನಿವಾಸಿ ಶ್ರೀ ಸ್ವಾಮಿ ಸಮರ್ಥ ಮಹಾರಾಜ್ ಎಂದು ಪ್ರಸಿದ್ಧರಾದರು.
ಇಲ್ಲಿ ಅವರು ಶ್ರೀ ದೇವ್ ಮಾಮ್ಲೆದಾರ್, ಶ್ರೀ ಬಾಲಪ್ಪ ಮಹಾರಾಜ್, ಶ್ರೀ ಚೋಳಪ್ಪ ಮಹಾರಾಜ್, ಆಲಂದಿಯ ಶ್ರೀ ನ್ರುಸಿಂಹ ಸರಸ್ವತಿ ಮಹಾರಾಜ್, ಪುಣೆಯ ಶ್ರೀ ರಾಮಾನಂದ್ ಬೀಡ್ಕರ್ ಮಹಾರಾಜ್ ಮುಂತಾದ ಅನೇಕ ಶಿಷ್ಯರಿಗೆ ದೀಕ್ಷೆ ನೀಡಿದರು.
ಮಹಾಸಮಾಧಿ
ಸುಮಾರು 600 ವರ್ಷಗಳ ಅವತಾರದ ನಂತರ ಏಪ್ರಿಲ್ 30, 1878 ರಂದು (ಹಿಂದೂ ವರ್ಷದ ಚೈತ್ರ ವಾಧ್ಯಾ ತ್ರಯೋದಶಿ), ಈ ಮಹಾನ್ ಚೇತನ ಮಹಾಸಮಧಿಯನ್ನು ತನ್ನ ನೆಚ್ಚಿನ ಆಲದ ಮರದ ಕೆಳಗೆ ಹೊಂದುತ್ತಾರೆ. ಭಕ್ತರು ಇಂದಿಗೂ ಅವರ ದೈವಿಕ ಉಪಸ್ಥಿತಿಯನ್ನು ಅನುಭವಿಸುತ್ತಾರೆ ಮತ್ತು "ನಾನು ಎಲ್ಲೂ ಹೋಗಿಲ್ಲ, ಈಗಲೂ ಇಲ್ಲೇ ಇದ್ದೇನೆ" ಎಂಬ ಉಲ್ಲೇಖದಿಂದಾಗಿ ಧೈರ್ಯವನ್ನು ಪಡೆದುಕೊಳ್ಳುತ್ತಾರೆ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಬರಹ
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಬರಹ
No comments:
Post a Comment